Feb 13, 2022, 12:47 PM IST
ರಾಮನಗರ(ಫೆ.13): ಹಿಜಾಬ್-ಕೇಸರಿ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನ ಉಲ್ಲಂಘಿಸಿದರೆ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಅಂತ ರಾಮನಗರ ಎಸ್‌ಪಿ ಸಂತೋಷ್ ಬಾಬು ತಿಳಿಸಿದ್ದಾರೆ. ರಾಮನಗರ ಜಿಲ್ಲೆ ಹಾಳು ಮಾಡೋದಕ್ಕೆ ನಾನು ಬಿಡೋದಿಲ್ಲ, ಒಂದು ವೇಳೆ ಹಾಳು ಮಾಡಲು ಬಂದವರನ್ನ ನಾನು ಬಿಡೋದಿಲ್ಲ, ತನ್ನ ತಾಳ್ಮೆಯನ್ನ ಪರೀಕ್ಷೆ ಮಾಡಬೇಡಿ ಅಂತ ಹಿಂದೂ-ಮುಸ್ಲಿಂ ಮುಖಂಡರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ನನಗೆ ಈ ಜಿಲ್ಲೆಯ ಮೇಲೆ ವಿಶೇಷವಾದ ಪ್ರೀತಿ, ಗೌರವ ಇದೆ. ಇದು ನಮ್ಮ ಜಿಲ್ಲೆ, ಇಲ್ಲಿ ಶಾಂತಿ ಸುವವ್ಯವಸ್ಥೆ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕೋಮುಸಾಮರಸ್ಯ ಮಾಡಿದ್ರೆ ಹುಟ್ಟಡಗಿಸಿಬಿಡುತ್ತೇನೆ ಅಂತ ಹೇಳಿದ್ದಾರೆ.
ಅಪ್ರಾಪ್ತೆ ಮದುವೆ ಮಾಡಿಕೊಡುವಂತೆ ರಂಪಾಟ: ಲಾಂಗ್ ಹಿಡಿದು ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ಮಾಡಿದ ಭೂಪ