ಕಾರ್ಕಳದಲ್ಲಿ ಪರಶುರಾಮ ಪ್ರತಿಮೆ: ತುಳುನಾಡು ಸೃಷ್ಟಿಕರ್ತನಿಗೆ ಗೌರವ

Jan 15, 2023, 5:12 PM IST

ಕಾರ್ಕಳ ಕ್ಷೇತ್ರದಲ್ಲಿ 33 ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆ ನಿರ್ಮಾಣವಾಗುತ್ತಿದೆ. 15 ಟನ್‌ ತೂಕದಲ್ಲಿ ಈ ಪ್ರತಿಮೆಯು, ಅಂದಾಜು ಎರಡು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಕಲಾವಿದ ಕೃಷ್ಣ ನಾಯಕ್‌ ಕೈಚಳಕದಲ್ಲಿ ಪ್ರತಿಮೆ ಮೂಡಿ ಬರಲಿದ್ದು, ನೆಲ ಮಟ್ಟದಿಂದ ಸುಮಾರು 400 ಅಡಿಯಷ್ಟು ಎತ್ತರ ಇರಲಿದೆ.