ಭಾರೀ ಮಳೆಗೆ ಜಿಲ್ಲೆಯ ಜನಜೀವನ ಅಸ್ತವ್ಯಸ್ತ| ಮಳೆಯಿಂದ ತುಂಬಿ ಹರಿಯುತ್ತಿರುವ ಹಳ್ಳ, ಕೊಳ್ಳಗಳು| ಜಮೀನುಗಳಿಗೂ ನುಗ್ಗಿದ ನೀರು| ನಾಲತವಾಡ ರಸ್ತೆ ಮೇಲೆ ಹರಿದ ಹಳ್ಳದ ನೀರು|
ವಿಜಯಪುರ(ಜೂ.29): ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಜಿಲ್ಲೆಯ ಜನಜೀವನವೇ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ಮಳೆಯಿಂದ ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ. ಜಮೀನುಗಳಿಗೂ ಕೂಡ ನೀರು ನುಗ್ಗಿದೆ. ನಾಲತವಾಡ ರಸ್ತೆ ಮೇಲೆ ಹಳ್ಳದ ನೀರು ಹರಿದಿದೆ. ಇದರಿಂದ ಜನರು ಪರದಾಡಿದ್ದಾರೆ.
ಊಟದಲ್ಲಿ ನೊಣ, ಗಬ್ಬುನಾರುವ ವಾರ್ಡ್‌ಗಳು: ಕೋವಿಡ್ ಆಸ್ಪತ್ರೆಯ ಅವ್ಯವಸ್ಥೆಯಿದು..!
ಇನ್ನು ಇದೇ ಹಳ್ಳದ ಪಕ್ಕದ ಗ್ರಾಮವೊಂದರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಹರಸಾಹಸ ಪಟ್ಟು ಹಳ್ಳ ದಾಟಿ ಪರೀಕ್ಷೆಗೆ ಹಾಜರ್ ಆಗಿದ್ದಾನೆ. ಭಾರೀ ಮಳೆಯಿಂದ ನಾಲತವಾಡ ಪಟ್ಟಣದ ಜನಜೀವನೇ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.