
ಮೈಸೂರಿಗೆ ದರ್ಶನ್ ಕರೆದೊಯ್ದು ಸ್ಥಳ ಮಹಜರು ನಡೆಸುವ ಪ್ರಕ್ರಿಯೆಯನ್ನು ಪೊಲೀಸರು ಕೈಬಿಟ್ಟಿದ್ದಾರೆ.
ನಟ ದರ್ಶನ್ ಅವರನ್ನು ಮೈಸೂರಿಗೆ(Mysore) ಕರೆದೊಯ್ದು ಸ್ಥಳ ಮಹಜರು(Spot Inspection) ಮಾಡುವ ಪ್ರಕ್ರಿಯೆಯನ್ನು ಪೊಲೀಸರು ಕೈಬಿಟ್ಟಿದ್ದಾರೆ. ಒಂದು ವೇಳೆ ದರ್ಶನ್ (Darshan)ಕರೆದೊಯ್ದ್ರೆ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ಸಾಧ್ಯತೆ ಇದೆ. ಇದರಿಂದ ಭದ್ರತೆಗೆ ತೊಂದರೆಯಾಗಲಿದೆ. ಹಾಗಾಗಿ ನಾಗರಾಜ್, ಲಕ್ಷ್ಮಣ್ ಇಬ್ಬರನ್ನು ಮಾತ್ರ ಕರೆದೊಯ್ಯಲಾಗಿದೆ. ಇನ್‌ಸ್ಪೆಕ್ಟರ್ ಲಕ್ಷ್ಮಣ್ , ಸಂಜೀವ್ಗೌಡ ನೇತೃತ್ವದಲ್ಲಿ ಮಹಜರು ನಡೆಸಲಾಗುತ್ತಿದೆ. ಇಬ್ಬರುನ್ನು ಮಾತ್ರ ಮೈಸೂರಿಗೆ ಕರೆದೊಯ್ದ ಪೊಲೀಸರು. ನಾಗರಾಜ್‌ಗೆ ಘಟನೆಯ ಸಂಪೂರ್ಣ ಮಾಹಿತಿ ಗೊತ್ತಿದ್ದು, ಆತನನ್ನು ಮಾತ್ರ ಕರೆದೊಯ್ಯಲಾಗಿದೆ. ಲಾ ಅಂಡ್ ಆರ್ಡರ್‌ಗೆ ತೊಂದರೆಯಾಗಬಾರದು ಎಂದು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಇದನ್ನೂ ವೀಕ್ಷಿಸಿ: ಪವಿತ್ರಾಗೌಡ ನಿವಾಸದಲ್ಲಿ ಮಹಜರು ವೇಳೆ ಸಿಕ್ಕಿದೇನು ? ತನಿಖೆ ವೇಳೆ ಆ ದಾಖಲೆ ಕಂಡು ಪೊಲೀಸರೇ ಶಾಕ್..!