ಫೀಲ್ಡಿಗಿಳಿದ ಸಿಂಗಂ ರವಿ ಚನ್ನಣ್ಣನವರ್: ಲಾಕ್‌ಡೌನ್ ಉಲ್ಲಂಘಿಸಿದವರಿಗೆ ವಿನೂತನ ಶಿಕ್ಷೆ

Jul 15, 2020, 4:39 PM IST

ಬೆಂಗಳೂರು,(ಜು.15): ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ  ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ 8 ದಿನಗಳ ಕಾಲ ಲಾಕ್‍ಡೌನ್ ಮೂಲಕ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. 

ಆದ್ರೆ ತಮಗೂ ಅದಕ್ಕೂ ಸಂಬಂಧವಿಲ್ಲವೇನೋ ಎನ್ನುವಂತೆ ಜನ ತಮ್ಮ ಪಾಡಿಗೆ ತಾವು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆ. ಹೀಗಾಗಿ ಲಾಕ್‌ಡೌನ್ ನಡುವೆ ಅನಗತ್ಯವಾಗಿ ಓಡಾಡುತ್ತಿರುವವರಿಗೆ ಬ್ರೇಕ್ ಹಾಕಲು ಬೆಂಗಳೂರು ಗ್ರಾಮಾಂತರ ಎಸ್ಪಿ ರವಿ ಡಿ ಚನ್ನಣ್ಣನವರ್ ಲಾಠಿ ಹಿಡಿದು ಫೀಲ್ಡಿಗಿಳಿದಿದ್ದಾರೆ.

'ಬೆಂಗಳೂರನ್ನು ನಿದ್ರೆ ಮಾಡಿಸ್ಬಹುದು, ಆದ್ರೆ, ಸ್ಮಶಾನ ಮಾಡಲು ಆಗೋದಿಲ್ಲ' 

ಅನಗತ್ಯವಾಗಿ ರಸ್ತೆಗಿಳಿದರೇ ರಸ್ತೇಲಿ ನಿಂತು ಇತರೇ ಬೈಕ್ ಗಳನ್ನ ನಿಲ್ಲಿಸಿ ಪೊಲೀಸರ ಜೊತೇ ಸ್ವಯಂ ಸೇವಕರಾಗಿ ಕೆಲಸ ಮಾಡುವ ವಿನೂತನ ಶಿಕ್ಷೆ ಕೊಟ್ಟಿದ್ದಾರೆ.