ಬಳ್ಳಾರಿಯಲ್ಲಿ ಹಾವಿನ ಆಕಾರದ ತೆಂಗಿನ ಗರಿ... ಜೆಸಿಬಿಯಿಂದ ಹಾವು ಕೊಂದಿದ್ದರು!

Dec 22, 2020, 8:13 PM IST

ಬಳ್ಳಾರಿ (ಡಿ. 22) ಪ್ರಕೃತಿಯ ವಿಶೇಷತೆಗಳೇ  ಹಾಗೆ. ಇಲ್ಲೊಂದು ತೆಂಗಿನ ಮರ ಹಾವಿನ ಆಕೃತಿ ತೆರೆದಿರಿಸಿದೆ.  ಹೂವಿನ ಹಡಗಲಿ ತಾಲೂಕಿನ ಹಿರೇಕೊಳಚಿ ಗ್ರಾಮದಲ್ಲಿ ವಿಚಿತ್ರವಾಗಿ ಬೆಳೆದ ಗರಿ ಎಲ್ಲರ ಗಮನ ಸೆಳೆಯುತ್ತಿದೆ.

ಇದನ್ನೂ ನೋಡಿ  ಸಂಬಂಧವಿರದ ವಿಷಯಕ್ಕೆ 'ತಲೆ' ಹಾಕ್ಬಾರ್ದು ಅನ್ನೋದು ಇದಕ್ಕೆ ನೋಡಿ..!...

ಈರಮ್ಮ ಎಂಬುವವರ ಜಮೀನಿನಲ್ಲಿ ಬೆಳೆದ ತೆಂಗಿನ ಮರದಲ್ಲಿ ಈ ರೀತಿಯ ಗರಿ ಕಾಣಿಸಿಕೊಂಡಿದೆ. ತೆಂಗಿನ ಮರ ವೀಕ್ಷಣೆಗೆ ತಂಡೋಪತಂಡವಾಗಿ ಗ್ರಾಮಸ್ಥರು ಆಗಮಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನೆಟ್ಟಿದ್ದ ತೆಂಗಿನ ಗಿಡದ ಗರಿ ಈಗ ಹಾವಿನ ಆಕೃತಿಯಲ್ಲಿ ಮೂಡಿದೆ.

ಈ ಹಿಂದೆ ನಡೆದ ಘಟನೆ ಈ ರೀತಿ ಮರ ಬೆಳೆಯಲು  ಕಾರಣ ಎಂದು ಹೇಳಲಾಗುತ್ತಿದೆ. ಜೆ.ಸಿ.ಬಿ.ಯಂತ್ರದ ಮೂಲಕ ಹಾವನ್ನು ಕೊಂದಿದ್ದ ದುಂಡಿ ಕುಮಾರ ಎಂಬ ರೈತ ನಾಗರ ಹಾವು ಕಡಿತಕ್ಕೆ ಸಾವನ್ನಪ್ಪಿದ್ದರು. ಅದೇ ಜಮೀನಿಲ್ಲಿ ನಾಟಿ ಮಾಡಿದ್ದ ದುಂಡಿಕುಮಾರನ ತಾಯಿ ತೆಂಗಿನ ಗಿ ನೆಟ್ಟಿದ್ದರು.