ಚಿತ್ರದುರ್ಗ: ರೈತನ ಜಮೀನಿನಲ್ಲಿ ವಿಚಿತ್ರ ಹಾವು: ಹೊಟ್ಟೆಯಲ್ಲಿದ್ದ 50 ಮರಿ ಕಂಡು ಬೆಚ್ಚಿಬಿದ್ದ ಗ್ರಾಮಸ್ಥರು

May 23, 2022, 6:05 PM IST

ಚಿತ್ರದುರ್ಗ (ಮೇ 23): ಕೋಟೆನಾಡು ಚಿತ್ರದುರ್ಗದ (Chitradurga) ಹಂಪನೂರು ಗ್ರಾಮದ ರೈತ ಜ್ಯೋತಿ ಪ್ರಕಾಶ್ ಜಮೀನಿನಲ್ಲಿ ವಿಚಿತ್ರ ಹಾವು ಪತ್ತೆಯಾಗಿದೆ. ಹಾವಿನ ಹೊಟ್ಟೆಯಲ್ಲಿಯೇ ಇದ್ದ ಸುಮಾರು 50 ಮರಿಗಳನ್ನು ಕಂಡು  ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.  ಸಾಮಾನ್ಯವಾಗಿ ಎಲ್ಲಾ ಹಾವುಗಳು ಮೊಟ್ಟೆ (Egg) ಇಡುತ್ತವೆ, ಆದರೆ ಈ ಹಾವು ಮರಿ ಹಾಕಿದೆ ಎಂದು ಜನ ನಿಬ್ಬೆರಗಾಗಿದ್ದಾರೆ. 

ಇದನ್ನೂ ಓದಿ: ತುಂಬಿ ಹರಿಯುವ ನದಿಯಲ್ಲಿ ಬಸ್ ಚಾಲಕನ ಸಾಹಸ: ವಿಡಿಯೋ ವೈರಲ್

ಗ್ರಾಮೀಣ ಭಾಗದಲ್ಲಿ ಇದನ್ನು ಬೆಂಜರಿ ಹಾವು ಎನ್ನುತ್ತಾರೆ. ಕೆಲವರು ಇದನ್ನು ರಸೆಲ್ಸ್ ವೈಪರ್ (Russell's Viper) ಹಾವು ಎನ್ನುತ್ತಾರೆ. ಇದು ತುಂಬಾ ವಿಷಪೂರಿತ ಹಾವು  ಎಂದು ಗ್ರಾಮಸ್ಥರು ಹೇಳಿದ್ದಾರೆ. ವಿಚಿತ್ರ ಹಾವು & ಹಾವಿನ ಮರಿಗಳ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ  (Social Media) ವೈರಲ್ ಆಗಿದೆ.