Dec 8, 2023, 10:12 AM IST
ಹೊಸಹಳ್ಳಿ ಗ್ರಾಮ.. ಯಲಬುರ್ಗಾ ತಾಲೂಕಿನ ಈ ಗ್ರಾಮ, ಕೊಪ್ಪಳ(Koppal) ಜಿಲ್ಲೆಯಲ್ಲೇ ರೇಷ್ಮೆ ಬೆಳೆಗೆ ಸುಪ್ರಸಿದ್ದಯಾಗಿರೋ ಗ್ರಾಮ. ಅದ್ರೆ, ಈಗ ಹೊಸಳ್ಳಿ ಗ್ರಾಮದ ರೇಷ್ಮೆ ಬೆಳೆಗಾರರು(Silk growers) ಕಂಗಾಲಾಗಿದ್ದಾರೆ. ಅದಕ್ಕೆ ಕಾರಣ ಗೂಡು ಕಟ್ಟದೆ ರೇಷ್ಮೆ ಹುಳುಗಳ ಸಾವು. ಹೌದು, ಈ ರೈತರು ಸಾಕಿದ ರೇಷ್ಮೆ ಹುಳುಗಳು ಗೂಡು ಕಟ್ಟುವ ಮುನ್ನವೇ ಸಾಯುತ್ತಿವೆ. ಇನ್ನು ಕೆಲ ಹುಳುಗಳು ಜೀವಂತವಿದ್ರೂ ರೇಷ್ಮೆ ಗೂಡನ್ನೇ ಕಟ್ಟುತ್ತಿಲ್ಲ. ಇದ್ರಿಂದ ಸಾವಿರಾರು ರೂಪಾಯಿ ಹಣ ಖರ್ಚು ಮಾಡಿ ರೇಷ್ಮೆ ಬೆಳೆದಿದ್ದ ರೈತರು ಕಂಗಾಲಾಗಿದ್ದಾರೆ. ಇಷ್ಟು ವರ್ಷವಿಲ್ಲದ ಈ ಸಮಸ್ಯೆ ಈ ಬಾರಿ ತಲೆದೋರಿದ್ಯಾಕೆ ಎನ್ನುವ ಪ್ರಶ್ನೆ ಕಾಡುತ್ತಿದೆ. ಆದ್ರೆ ಇದಕ್ಕೆಲ್ಲ ರೇಷ್ಮೆ ಮೊಟ್ಟೆಗಳ ಗೋಲ್ಮಾಲ್ ಕಾರಣ ಅನ್ನೋದು ರೈತರು (Farmers)ಆರೋಪ.ರೇಷ್ಮೆಮೊಟ್ಟೆ ನೀಡಿದ ಕಂಪನಿಗಳು ಹಣದಾಸೆಗಾಗಿ ಕಳಪೆ ಮೊಟ್ಟೆಗಳನ್ನು ತಂದು, ಮರಿ ಮಾಡಿ ಅವುಗಳನ್ನು ರೈತರಿಗೆ ನೀಡುತ್ತಿದ್ದಾರೆ. ಹೀಗಾಗಿ ಹುಳುಗಳು ಗೂಡು ಕಟ್ಟುತ್ತಿಲ್ಲ ಅನ್ನೋದು ರೈತರ ಆರೋಪ. ,ಆದ್ರೆ ಇದಕ್ಕೆ ರೇಷ್ಮೆ ಇಲಾಖೆ ಅಧಿಕಾರಿಗಳು ಬೇರೆಯದ್ದೇ ಕತೆ ಹೇಳ್ತಿದ್ದಾರೆ. ವಾತಾವರಣದಲ್ಲಿನ ಬದಲಾವಣೆ ಇದಕ್ಕೆಲ್ಲ ಕಾರಣ. ಜೊತೆಗೆ ರೈತರು ವಿವಿಧ ಬೆಳೆಗಳನ್ನು ಬೆಳೆಯಲು ಸಾಕಷ್ಟು ಕೆಮಿಕಲ್ಗಳ ಬಳಕೆ ಮಾಡುತ್ತಿದ್ದಾರೆ. ಅದು ಗಾಳಿಯ ಮೂಲಕ ಹಿಪ್ಪು ನೇರಳೆ ಸೊಪ್ಪಿನ ಮೇಲೆ ಬೀಳುತ್ತಿದೆ. ಕೆಮಿಕಲ್ ಸೇರಿರುವ ಹಿಪ್ಪು ನೇರಳೆ ಸೊಪ್ಪನ್ನು ತಿನ್ನುವುದರಿಂದ ಹುಳುಗಳು ಗೂಡು ಕಟ್ಟುತ್ತಿಲ್ಲಾ ಅಂತ ಅಧಿಕಾರಿಗಳು ಹೇಳುತ್ತಿದ್ದಾರೆ. ಕಾರಣ ಏನಿದ್ಯೋ ಗೊತ್ತಿಲ್ಲ ಹೊಸಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರು ತಂದಿದ್ದ ರೇಷ್ಮೆ ಹುಳುಗಳು ಗೂಡು ಕಟ್ಟದೆ ಸಾಯುತ್ತಿವೆ.
ಇದನ್ನೂ ವೀಕ್ಷಿಸಿ: ಬೆಂಗಳೂರಿನ ಐತಿಹಾಸಿಕ ದೇಗುಲದ ಗೋಪುರದಲ್ಲಿ ಬಿರುಕು..! ದೊಡ್ಡ ಬಸವ ದೇಗುಲ ಗೋಪುರ ದುರಸ್ಥಿ ಯಾವಾಗ..?