Jan 15, 2023, 10:14 AM IST
ವಿಜಯಪುರದ ಮುಳವಾಡದ ಐಬಿಯಲ್ಲಿ ಶ್ರೀಗಳ ವಾಸ್ಥವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಊರ ದೇವಿ ಜಾತ್ರೆ ಇರುತ್ತಿತ್ತು. ಪ್ರಾಣಿ ಬಲಿಯನ್ನು ಕೊಡುತ್ತಿದ್ದರು. ಈ ಸಂದರ್ಭದಲ್ಲಿ ಪೂಜ್ಯರು ಹೀಗೆ ಪ್ರಾಣಿ ಹಿಂಸೆ ಮಾಡಬಾರದು, ಇದು ಮಹಾ ಪಾಪ ಎಂದು ಹೇಳಿದ್ದರು. ಮನುಷ್ಯರನ್ನು ಹಿಂಸೆ ಮಾಡಿದಾಗ ಹೇಗೆ ದುಃಖವಾಗುತ್ತದೆಯೋ ಹಾಗೇ ಪ್ರಾಣಿ ಹಿಂಸೆಯನ್ನು ಮಾಡುವುದು ಸರಿ ಅಲ್ಲ. ಹಿಂಸಾ ಮಾರ್ಗವನ್ನು ತ್ಯಾಗ ಮಾಡಬೇಕು ಎಂದು ಹೇಳಿದರು. ಅವರು ಹೇಳಿದ್ದನ್ನು ಕೇಳಿ ಅಲ್ಲಿನ ಜನರು ಅಹಿಂಸಾ ಮಾರ್ಗವನ್ನು ಬಿಟ್ಟರು. ಮಾತಿನಿಂದಲೂ ಕೂಡಾ ಹಿಂಸೆ ಆಗಬಾರದೆಂದು ಶ್ರೀಗಳು ಹೇಳಿದರು. ಹಾಗೆ ಕೆಟ್ಟ ದೃಷ್ಟಿಯಿಂದಲೂ ಕೂಡಾ ನೋಡಬಾರದೆಂದು ಹೇಳಿದ್ದರು.