ಬೆಳಗಾವಿಯಲ್ಲಿ, ಹಿರಿಯ ಸಾಹಿತಿ ಡಾ. ಸರಜೂ ಕಾಟ್ಕರ್ ವಿರಚಿತ "ಛತ್ರಪತಿ ಶಿವಾಜಿ ದಿ ಗ್ರೇಟ್ ಮರಾಠ" ಕೃತಿಯನ್ನು ಸಚಿವ ಸತೀಶ್ ಜಾರಕಿಹೊಳಿ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಶಿವಾಜಿ ಮಹಾರಾಜರು ಕೇವಲ ಮರಾಠಿಗರಿಗೆ ಸೀಮಿತರಲ್ಲ, ಅಂಬೇಡ್ಕರ್, ಬಸವಣ್ಣನವರಂತೆ ಎಲ್ಲ ಸಮಾಜದವರಿಗೂ ಸೇರಿದವರೆಂದು ಪ್ರತಿಪಾದಿಸಿದರು. ಶಿವಾಜಿಯವರ ಸೇನೆಯಲ್ಲಿ ಮುಸ್ಲಿಮರಿದ್ದು, ಅವರು ಮಸೀದಿಗಳನ್ನೂ ನಿರ್ಮಿಸಿದ್ದರು ಹಾಗೂ ಶೂದ್ರರೆಂಬ ಕಾರಣಕ್ಕೆ ಪಟ್ಟಾಭಿಷೇಕಕ್ಕೆ ವಿರೋಧ ಎದುರಿಸಿದ್ದರು ಎಂಬ ಐತಿಹಾಸಿಕ ಸತ್ಯಗಳನ್ನು ತೆರೆದಿಟ್ಟರು. ಅವರ ನೈಜ ಇತಿಹಾಸವನ್ನು ಕೆಲವರು ಮುಚ್ಚಿಹಾಕುವ ಪ್ರಯತ್ನ ಮಾಡಿದ್ದು, ಜ್ಯೋತಿಬಾ ಫುಲೆಯವರು ಅದನ್ನು ಜಗತ್ತಿಗೆ ತಿಳಿಸಿದರು ಎಂದು ಸಚಿವರು ಸ್ಮರಿಸಿದರು. Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared