Oct 3, 2023, 11:01 AM IST
ಈ ಶಾಲೆಯ ಕಟ್ಟಡದ ಗೋಡೆಗಳು ಬಿರುಕು ಬಿಟ್ಟಿವೆ, ಇಡೀ ಶಾಲೆಯೇ(School) ನೆಲಕ್ಕೆ ಕುಸಿಯುವ ಹಂತದಲ್ಲಿದೆ. ಮೇಲ್ಛಾವಣೆಯ ಶೀಟುಗಳು ಒಡೆದು ಹೋಗಿದ್ದು, ಮಳೆಗಾಲದಲ್ಲಿ ನೀರು ಸೋರಿದ್ರೆ, ಬಿಸಿಲಿದ್ದಾಗ ನೆತ್ತಿ ಸುಡುತ್ತೆ. ಈ ಶಾಲೆ ವಿದ್ಯಾರ್ಥಿಗಳು(Students) ನೆಮ್ಮದಿಯಿಂದ ಪಾಠ ಕೇಳೋ ಬದಲು ನರಕಯಾತನೆ ಅನುಭವಿಸುವಂತಾಗಿದೆ. ಶಿಕ್ಷಕರು, ಗ್ರಾಮಸ್ಥರು ಈ ಬಗ್ಗೆ ಅಧಿಕಾರಿಗಳಿಗೆ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದೇ ಶಿಥಿಲ ಕಟ್ಟದಲ್ಲೇ ಪಾಠ ಕಲಿಯುತ್ತಿದ್ದಾರೆ. ದಿನನಿತ್ಯ ಪೋಷಕರು ಜೀವ ಭಯದಲ್ಲೇ ಮಕ್ಕಳನ್ನ ಶಾಲೆಗೆ ಕಳಿಸ್ತಿದ್ದಾರೆ. ಶಾಲೆ ಅವಸ್ಥೆಗೆ ಬೆದರಿ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸಲು ಹಿಂದೇಟು ಹಾಕುತ್ತಿದ್ದು, ಮಕ್ಕಳ ಸಂಖ್ಯೆ ಕೂಡ ಕಡಿಮೆ ಆಗ್ತಿದೆ. ಕಳೆದ ವರ್ಷಕ್ಕಿಂತ ಈ ಬಾರಿ ದಾಖಲಾತಿ ಕುಸಿದಿದೆ. ಶಾಲಾ ಆವರಣ ಅಕ್ರಮ ಚಟವಟಿಕೆಗಳ ತಾಣವಾಗ್ತಿದೆ ಅನ್ನೋ ಆರೋಪವೂ ಇದೆ. ಸ್ವಾತಂತ್ರ್ಯಕ್ಕೂ ಮೊದಲೇ ನಿರ್ಮಾಣವಾದ ಈ ಶಾಲೆಗೆ ಈಗ 95 ವರ್ಷ ಪೂರ್ಣಗೊಂಡಿದೆ. ಶಾಲೆ ಕಟ್ಟಡದ (Building) ಆಯಸ್ಸು ಮುಗಿಯುತ್ತಾ ಬಂದಿದ್ದು, ಆದಷ್ಟು ಬೇಗ ಸರ್ಕಾರ ಎಚ್ಚೆತ್ತುಕೊಳ್ಳಬೇಕಿದೆ.. ಮುಂದಾಗುವ ಅನಾಹುತ ತಪ್ಪಿಸಬೇಕಿದೆ ಅನ್ನೋದು ಸ್ಥಳೀಯರ ಆಗ್ರಹವಾಗಿದೆ.
ಇದನ್ನೂ ವೀಕ್ಷಿಸಿ: ರಾಜಕಾಲುವೆ ಒತ್ತವರಿ ಪತ್ತೆಗೆ BBMP ಹೊಸ ಪ್ಲಾನ್: BBMP ಮನವಿಗೆ ಸಾರ್ವಜನಿಕರ ಸಕತ್ ರೆಸ್ಪಾನ್ಸ್..!