Jun 21, 2020, 3:28 PM IST
ಬಾಗಲಕೋಟೆ (ಜೂ.21): ಸೂರ್ಯಗ್ರಹಣದ ಮಧ್ಯೆಯೂ ಭಕ್ತರು ಸಂಗಮನಾಥನ ದರ್ಶನ ಪಡೆದಿದ್ದಾರೆ. ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಸಂಗಮೇಶ್ವರ ದೇವಸ್ಥಾನದಲ್ಲಿ ಮೌಢ್ಯ ಹೋಗಲಾಡಿಸಲು ಗ್ರಹಣದ ವೇಳೆ ದೇವರ ದರ್ಶನಕ್ಕೆ ಭಕ್ತರಿಗೆ ಅವಕಾಶ ಮಾಡಿಕೊಡಲಾಗಿತ್ತು.
ಸೂರ್ಯಗ್ರಹಣ 2020: ಬೇರೆ ದೇಶಗಳಲ್ಲಿ ಸೂರ್ಯ ಗೋಚರಿಸಿದ್ದು ಹೀಗೆ..!
ಕೃಷ್ಣಾ, ಮಲಪ್ರಭಾ ಘಟಪ್ರಭಾ ನದಿಗಳ ತ್ರಿವೇಣಿ ಸಂಗಮದಲ್ಲಿ ಬಸವಣ್ಣನವರ ಐಕ್ಯ ಮಂಟಪವಿರುವ ಪವಿತ್ರ ಕ್ಷೇತ್ರ ಕೂಡಲ ಸಂಗಮವಾಗಿದೆ. ಗ್ರಹಣದ ನಿಮಿತ್ತ ಭಕ್ತರು ಕೃಷ್ಣಾ ನದಿಯಲ್ಲಿ ದೇಹದ ಅರ್ಧಭಾಗ ಮುಳುಗಿ ಧ್ಯಾನ ಮಾಡಿದ್ದಾರೆ. ಕೊರೋನಾ ವೈರಸ್ ಹಿನ್ನೆಲೆ ನದಿ ಸ್ನಾನಕ್ಕೆ ನಿಷೇಧ ಹೇರಲಾಗಿದೆ. ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಜಾಗ ಹೊರತುಪಡಿಸಿ ಕೃಷ್ಣಾ ನದಿಯಲ್ಲಿ ಭಕ್ತರು ಜಪ, ತಪ ಮಾಡಿದ್ದಾರೆ. ಕೃಷ್ಣಾ ನದಿ ತಟದಲ್ಲಿ ಅಸಂಖ್ಯಾತ ಭಕ್ತರು ಧ್ಯಾನ ಮಾಡಿದ್ದಾರೆ.