Oct 28, 2023, 10:57 AM IST
ನೇತ್ರಾವತಿ, ಕುಮಾರಧಾರ, ಪಲ್ಗುಣಿ, ನಂದಿನಿ, ಪಯಸ್ವಿನಿ... ಈ ಪಂಚ ನದಿಗಳು ಹರಿಯುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸದೊಂದು ಸಮಸ್ಯೆ ಶುರುವಾಗಿದೆ. ಜಿಲ್ಲೆಯ ಈ ಎಲ್ಲಾ ನದಿಗಳಲ್ಲೂ ಯಥೇಚ್ಚವಾಗಿ ಮರಳು ಸಂಗ್ರಹ ಇದ್ರೂ , ದಕ್ಷಿಣ ಕನ್ನಡ(Dakshina Kannada) ಜಿಲ್ಲೆಯಲ್ಲಿ ಕಾಮಗಾರಿಗೆ ಮರಳು(Sand) ಸಿಗ್ತಾ ಇಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಹುತೇಕ ಸರ್ಕಾರಿ ಹಾಗೂ ಖಾಸಗಿಯಾಗಿ ನಡೆಯುತ್ತಿರುವ ಕಾಮಗಾರಿಗಳಿಗೆ ಮರಳು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಹೀಗೇ ಮುಂದುವರೆದ್ರೆ ಇನ್ನು ಹತ್ತು ದಿನಗಳಲ್ಲಿ ಸಂಪೂರ್ಣ ಕಾಮಗಾರಿಗಳು ಸ್ಥಗಿತಗೊಳ್ಳಲಿದ್ದು, ಗುತ್ತಿಗೆದಾರರು ಸಂಕಷ್ಟ ಎದುರಿಸಬೇಕಾದ ಆತಂಕ ಎದುರಾಗಿದೆ. ಕಾಮಗಾರಿ(Works) ಸ್ಥಗಿತಗೊಂಡ್ರೆ ಕಾರ್ಮಿಕರು, ಹಾಗೂ ಕಟ್ಟಡ ಕಾಮಗಾರಿಗೆ ಪೂರಕವಾಗಿ ಕೆಲಸ ಮಾಡುವ ಸಾವಿರಾರು ಜನರು ಕೆಲಸ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಲಿದೆ. ಅಕ್ಟೋಬರ್ ಮೊದಲ ವಾರದಲ್ಲೇ ಮರಳುಗಾರಿಕೆ ಆರಂಭವಾಗಬೇಕಿತ್ತಾದ್ರೂ, ಈ ಬಾರಿ ಮಳೆಗಾಲ ಮುಗಿದ ಬಳಿಕವೂ ಸರ್ಕಾರ ಮರಳುಗಾರಿಕೆಗೆ ಅವಕಾಶ ಕಲ್ಪಿಸಿಲ್ಲ. ಸಿಯಾರ್ಡ್ ವ್ಯಾಪ್ತಿಯಲ್ಲಿ ಮರಳು ದಿಬ್ಬಗಳನ್ನು ಗುರುತಿಸಿರೋ ಗಣಿ ಇಲಾಖೆ ಮರಳು ತೆಗೆಯಲು ಅನುಮತಿಗಾಗಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆಯಾದ್ರೂ ಸರ್ಕಾರ ಇನ್ನೂ ಉತ್ತರ ನೀಡಿಲ್ಲ. ಇನ್ನು ನದಿಗಳಲ್ಲಿ ಮರಳು ತೆಗೆಯುವ ಗುತ್ತಿಗೆ ಪಡೆದವರಿಗೆ ವೇ ಬ್ರಿಜ್ ನಿರ್ಮಾಣ ಮಾಡಬೇಕು ಅನ್ನೋ ಕಾನೂನು ತಂದ ಕಾರಣ ನದಿಯಲ್ಲೂ ಮರಳುಗಾರಿಕೆ ನಡೆಯುತ್ತಿಲ್ಲ. ಹಾಗಂತ ಕಾಳಸಂತೆಯಲ್ಲಿ ಮರಳು ಸಿಗ್ತಾ ಇರೋದು ಮಾತ್ರವಲ್ಲದೆ ಬೆಂಗಳೂರು , ಕೇರಳ ಕಡೆಗೆ ರವಾನೆಯಾಗುತ್ತಿದೆ. ಹೀಗಾಗಿ ಸರ್ಕಾರ ತಕ್ಷಣ ಜಿಲ್ಲೆಗೆ ಪ್ರತ್ಯೇಕ ಮರಳು ನೀತಿ ರೂಪಿಸಿ ಸಮಸ್ಯೆ ಬಗೆ ಹರಿಸುವಂತೆ ಒತ್ತಾಯಿಸುತ್ತಿದ್ದಾರೆ.
ಇದನ್ನೂ ವೀಕ್ಷಿಸಿ: 31 ವರ್ಷದ ಹಿಂದೆ ರೈತರ ಜಮೀನು ಭೂಸ್ವಾಧೀನ: ಏಕಾಏಕಿ ಬಡವರ ಮನೆ ನೆಲಸಮಗೊಳಿಸಿದ KIADB