'ಹೆಡಗೇವಾರ್‌ಗಿಂತ ಈ ರೋಹಿತ್ ಚಕ್ರತೀರ್ಥ ಒಂದು ಹೆಜ್ಜೆ ಮುಂದಿದ್ದಾನೆ': ಸಿದ್ದರಾಮಯ್ಯ ವಾಗ್ದಾಳಿ

'ಹೆಡಗೇವಾರ್‌ಗಿಂತ ಈ ರೋಹಿತ್ ಚಕ್ರತೀರ್ಥ ಒಂದು ಹೆಜ್ಜೆ ಮುಂದಿದ್ದಾನೆ': ಸಿದ್ದರಾಮಯ್ಯ ವಾಗ್ದಾಳಿ

Published : May 27, 2022, 06:03 PM ISTUpdated : May 27, 2022, 06:04 PM IST

"ನಮ್ಮ ದೇಶ ಎಲ್ಲಿಗೆ ಹೋಗುತ್ತಿದ ಎಂದು ಊಹಿಸಿಕೊಳ್ಳಿ, ಹೆಡ್ಗೆವಾರ್‌ಗಿಂತ ಈ ರೋಹಿತ್ ಚಕ್ರತೀರ್ಥ ಒಂದು ಹೆಜ್ಜೆ ಮುಂದಿದ್ದಾನೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ 

ಬೆಂಗಳೂರು (ಮೇ 27): ಶಾಲಾ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಇದೀಗ ಹಲವು ಮಜಲುಗಳನ್ನು ಪಡೆದುಕೊಂಡಿದೆ. ಪರಿಷ್ಕರಣೆ ವೇಳೆ ರಾಷ್ಟ್ರೀಯ ಸ್ವಯಂಸೇವಕ ಸಂಘ (RSS)ದ ಸಂಸ್ಥಾಪಕ ಹೆಡಗೇವಾರ್‌ (K  B Hedgewar) ಭಾಷಣವನ್ನು ಸೇರ್ಪಡೆ ಮಾಡಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಬೆನ್ನಲ್ಲೇ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) "ರೋಹಿತ್‌ನಂತ ವ್ಯಕ್ತಿ ಬಳಿ ಪಠ್ಯ ಪುಸ್ತಕ ರಚನೆ ಕೊಟ್ಟಿದ್ದಾರೆ, ಆತ ಪಠ್ಯಪುಸ್ತಕದಲ್ಲಿ ಏನಿರಬೇಕು ಎಂದು ತೀರ್ಮಾನ ಮಾಡುತ್ತಾನೆ, ನಮ್ಮ ದೇಶ ಎಲ್ಲಿಗೆ ಹೋಗುತ್ತಿದ ಎಂದು ಊಹಿಸಿಕೊಳ್ಳಿ, ಹೆಡ್ಗೆವಾರ್‌ಗಿಂತ ಈ ರೋಹಿತ್ ಚಕ್ರತೀರ್ಥ ಒಂದು ಹೆಜ್ಜೆ ಮುಂದಿದ್ದಾನೆ" ಎಂದಿದ್ದಾರೆ.

ಇದನ್ನೂ ಓದಿ: ಭುಗಿಲೆದ್ದ ಪಠ್ಯ ಪರಿಷ್ಕರಣೆ ವಿವಾದ: ರಾಜ್ಯ ಸರ್ಕಾರಕ್ಕೆ ಗಡವು ನೀಡಿದ ನಾರಾಯಣ ಗೌಡ

"ಗತ್‌ ಸಿಂಗ್‌ ಪಠ್ಯ ತೆಗೆದು ಹೆಡಗೇವಾರ್‌ ಭಾಷಣ ಸೇರಿಸಿದ್ದಾರೆ, ಚರಿತ್ರೆ ಇಲ್ಲಿವರೆಗೆ ತಿರುಚಿದ್ದಾರೆ ಮತ್ತೆ ತಿರುಚುತ್ತಿದ್ದಾರೆ, ಬಿಜೆಪಿ ಬಂದಮೇಲೆ ಯಾವ ಚರಿತ್ರೆ ಓದಬೇಕು ತಿಳಿತಿಲ್ಲ" ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಇನ್ನು ಪಠ್ಯ ಪರಿಷ್ಕರಣೆ ಬಳಿಕ ಕೆಲವು ಲೇಖಕರಿಗೆ ಸಂಬಂಧಿಸಿದ ಗದ್ಯವನ್ನು ಪಠ್ಯ ಪುಸ್ತಕ ರಚನಾ ಸಮಿತಿ ಸೇರ್ಪಡೆ ಮಾಡಿರುವುದರಿಂದ ಶಾಲಾ ಪಠ್ಯದಲ್ಲಿ ಕೇಸರೀಕರಣವಾಗಿದೆ ಎಂದು ಹಲವು ಸಂಘಟನೆಗಳು, ಎಡಪಂಥೀಯ ನಾಯಕರು ಹಾಗೂ ರಾಜಕೀಯ ಪಕ್ಷಗಳು ದೂರುತ್ತಿವೆ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more