Uttara Kannada: ನಿವೃತ್ತ ಅರಣ್ಯಾಧಿಕಾರಿಯಿಂದ ನೂತನ ಶೈಲಿಯಲ್ಲಿ ಪರಿಸರ ಸಂರಕ್ಷಣೆ..!

Uttara Kannada: ನಿವೃತ್ತ ಅರಣ್ಯಾಧಿಕಾರಿಯಿಂದ ನೂತನ ಶೈಲಿಯಲ್ಲಿ ಪರಿಸರ ಸಂರಕ್ಷಣೆ..!

Suvarna News   | Asianet News
Published : Feb 12, 2022, 01:10 PM IST

*  ನೂರಾರು ವರ್ಷ ಕಾಲ ಬಾಳುವ ಮರಗಳು, ಔಷಧಿ ಗುಣವುಳ್ಳ ಗಿಡಗಳ ಕಾಡು 
*  37 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಎಲ್.ಆರ್. ಹೆಗಡೆ 
*  ಇಳಿ ವಯಸ್ಸಿನಲ್ಲೂ ಕಾಡು ಸಂರಕ್ಷಣೆ ಮಾಡುವ, ಮರ ಬೆಳೆಸುವ ಆಸಕ್ತಿ
 

ಕಾರವಾರ(ಫೆ.12):  ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರುಕಲ್ಲಬ್ಬೆ ಗ್ರಾಮದ ನಿವಾಸಿಯಾಗಿರುವ ನಿವೃತ್ತ ಅರಣ್ಯಾಧಿಕಾರಿ ಎಲ್.ಆರ್. ಹೆಗಡೆ ವಿಶೇಷ ಪದ್ಧತಿಯ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಿದ್ದಾರೆ. ನೂರಾರು ವರ್ಷಗಳ ಕಾಲ ಬೆಳೆಯುವ ಮರಗಳು ಸೇರಿದಂತೆ ಹಲವು ಬಗೆಯ ಔಷಧೀಯ ಗಿಡಗಳನ್ನು ಬೋನ್ಸಾಯ್ ಪದ್ಧತಿಯ ಮೂಲಕ ಬೆಳೆಸಿರುವ ಅವರು ಮನೆಯ ಮುಂದೆ ಅರಣ್ಯವನ್ನೇ ಸೃಷ್ಠಿಸಿದ್ದಾರೆ. 

ಎಲ್.ಆರ್. ಹೆಗಡೆ ಅರಣ್ಯ ಇಲಾಖೆಯಲ್ಲಿ 37 ವರ್ಷಗಳ ಕಾಲ ಸೇವೆ ಸಲ್ಲಿಸಿ ಅರಣ್ಯ ವಲಯಾಧಿಕಾರಿಯಾಗಿ ನಿವೃತ್ತಿಯಾಗಿದ್ದರು. ತಾನು ನಿವೃತ್ತಿಯಾಗಿದ್ದರೂ ತನ್ನ ಅಭ್ಯಾಸ ಹಾಗೂ ಪ್ರಕೃತಿ ಮೇಲಿನ ಪ್ರೀತಿಗೆ ನಿವೃತ್ತಿಯಾಗದಂತೆ ಇಳಿ ವಯಸ್ಸಿನಲ್ಲೂ ಕಾಡು ಸಂರಕ್ಷಣೆ ಮಾಡುವ, ಮರ ಬೆಳೆಸುವ ಆಸಕ್ತಿ ಬೆಳೆಸಿಕೊಂಡಿದ್ದಾರೆ. ಕಳೆದ 7 ವರ್ಷದಿಂದ ಬೋನ್ಸಾಯ್ ಪದ್ಧತಿಯಲ್ಲಿ ಕೃಷಿ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಅವರು, ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಂಡು, ವರಹಾಮಿಹೀರ ಹಾಗೂ ಇತರ ಋಷಿಮುನಿಗಳು ಬರೆದಂತ ಗ್ರಂಥದ ಅನುಗುಣವಾಗಿ ವನ ನಿರ್ಮಾಣ ಮಾಡಿದ್ದಾರೆ. ಸಪ್ತರ್ಷಿ ವನ, ರಾಶಿ ವನ, ಪಂಚಫಲ ವನ, ನಕ್ಷತ್ರ ವನ, ನವಗ್ರಹವನ ಸೇರಿದಂತೆ ಸುಮಾರು 175ಕ್ಕೂ ಅಧಿಕ ಜಾತಿಯ ಔಷಧಿ ಗುಣವುಳ್ಳ ಹಾಗೂ ಬಹುವರ್ಷ ಬಾಳುವ ಮರಗಳನ್ನು, ಗಿಡಗಳನ್ನು ಬೆಳೆಸಿದ್ದಾರೆ. 

Dharwad: ಕಾಮಗಾರಿ ಓಕೆ, ತೆರಿಗೆ ಕಟ್ಟಲ್ಲ ಯಾಕೆ?: ಟ್ಯಾಕ್ಸ್‌ ಕಟ್ಟದ ಕಂಪನಿಗೆ ಗ್ರಾಪಂ ನೋಟಿಸ್

ಬೋನ್ಸಾಯ್ ಕೃಷಿ ಪದ್ಧತಿಯಲ್ಲಿ ಮರವು ತನ್ನ ಮೂಲ ಗುಣದಲ್ಲಿಯೇ ಬೆಳೆಯುತ್ತಾದರೂ, ಕುಬ್ಜವಾಗಿರುತ್ತೆ. ಈ ಕಾರಣದಿಂದ ಇವುಗಳನ್ನು ಹುಂಡದಲ್ಲಿ ಬೆಳೆಸಲಾಗುತ್ತದೆ. ಈ ಮಾದರಿಯಲ್ಲಿ ಎಲ್.ಆರ್.ಹೆಗಡೆ ಅವರು ಕಲ್ಲಬ್ಬೆಯ ತಮ್ಮ ಮನೆ ಆವರಣದಲ್ಲೇ ಕಲಾನಿಕೇತನ ಕುಬ್ಜವನ ಎಂಬ ಅರಣ್ಯ ನಿರ್ಮಾಣ ಮಾಡಿದ್ದು, ನೂರಾರು ವರ್ಷಗಳ ಕಾಲ ಬದುಕುವ ಮರಗಳನ್ನು ಇಲ್ಲಿ ನೋಡಬಹುದಾಗಿದೆ. ಇನ್ನು ಇಲ್ಲಿ ಔಷಧೀಯ ಗುಣಗಳುಳ್ಳ ಗಿಡಗಳನ್ನು ಬೆಳೆಸಲಾಗಿದ್ದು, ಆಲ, ಅರಳಿ, ಅಶ್ವತ, ಬೀಟೆ, ರಕ್ತ ಚಂದನ, ರುದ್ರಾಕ್ಷಿ, ನೆಲ್ಲಿ, ಅಶ್ವಿನಿ, ದೇವವೃಕ್ಷ ಸೇರಿದಂತೆ ವಿವಿಧ ಜಾತಿಯ 400 ಗಿಡಗಳನ್ನು ಬೆಳೆಸಲಾಗಿದೆ. ಅತೀ ಕಡಿಮೆ ನೀರು ಹಾಗೂ ಕಡಿಮೆ ಜಾಗದಲ್ಲಿ ಈ ಸಣ್ಣ ಕಾಡು ನಿರ್ಮಾಣ ಮಾಡಲಾಗಿದ್ದು, ಇಲ್ಲಿಗೆ ಭೇಟಿ ನೀಡುವ ಯಾವುದೇ ಜನರು ಬೋನ್ಸಾಯ್ ಕೃಷಿ ಪದ್ಧತಿ ಬಗ್ಗೆ ಉಚಿತವಾಗಿ ಮಾಹಿತಿ ಪಡೆಯಬಹುದಾಗಿದೆ. 
 

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
24:37ಹೆಂಡತಿ ಕೊಂದು ಬೋರ್‌ವೆಲ್‌ನಲ್ಲಿ ಬಾಡಿ ಬೀಸಾಡಿದ್ದ ಗಂಡ, ದೇವರಿಗೆ ತಪ್ಪೊಪ್ಪಿಗೆ ಪತ್ರ ಬರೆದು ಸಿಕ್ಕಿಬಿದ್ದ!
Read more