ಕ್ರಿಕೆಟ್‌ ತಂಡದಲ್ಲಿ 7 ಜನ ಮುಸ್ಲಿಂ ಆಟಗಾರರು ಕಡ್ಡಾಯ: ಕಾರವಾರದಲ್ಲಿ ಕ್ರೀಡೆಯಲ್ಲೂ ಧರ್ಮದ ಅಮಲು

Jan 20, 2023, 11:17 AM IST

ವ್ಯಾಪಾರ ಹಾಗೂ ಧಾರ್ಮಿಕ ಕಾರ್ಯಕ್ರಮಗಳ ಬಳಿಕ, ಕ್ರೀಡೆಗೂ ಧರ್ಮ ದಂಗಲ್ ಎಂಟ್ರಿ ಕೊಟ್ಟಿದೆ. ಕಾರವಾರದಲ್ಲಿ ನಡೆಯುವ ಕ್ರಿಕೆಟ್‌ ಟೂರ್ನಿಯಲ್ಲಿ ಧರ್ಮಕ್ಕೆ ಮಣೆ ಹಾಕಲಾಗಿದ್ದು, ಯೂತ್‌ ಕಾಂಗ್ರೆಸ್‌ ಕಮಿಟಿಯ ಸದಸ್ಯರ ನೇತೃತ್ವದಲ್ಲಿ, ವೈಸಿಸಿ ಕಾರವಾರ ಮುಸ್ಲಿಂ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಟೂರ್ನಿ ನಡೆಯಲಿದೆ. ಲೀಗ್‌ ಕ್ರಿಕೆಟ್‌ ತಂಡಗಳಲ್ಲಿ ಕಡ್ಡಾಯವಾಗಿ 7 ಜನರು ಮುಸ್ಲಿಂ ಆಟಗಾರರು ಇರಬೇಕು. ಉಳಿದ ನಾಲ್ವರು ಬೇರೆ ಧರ್ಮದಿಂದ ಸೇರಿಕೊಳ್ಳಬಹುದು. ಮುಸ್ಲಿಂ ಆಟಗಾರರಿಲ್ಲದೇ ಯಾವುದೇ ತಂಡಕ್ಕೆ  ಎಂಟ್ರಿಯೇ ಇಲ್ಲ. ಕಾರವಾರ ಮುಸ್ಲಿಂ ಯುವಕರಿಂದಲೇ ಈ ಟೂರ್ನಿ ಆಯೋಜನೆ ಮಾಡಲಾಗಿದ್ದು, ಈ ಕ್ರಿಕೆಟ್‌ ಟೂರ್ನಿಗೆ ಸರ್ಕಾರಿ ಮಾಲಾದೇವಿ ಮೈದಾನ ಬಳಕೆ ಮಾಡಲಾಗಿದೆ. ಈ ನಿಯಮ ಗೊತ್ತಿದ್ದರೂ ಅಧಿಕಾರಿಗಳು ಆಟಕ್ಕೆ ಅನುಮತಿ ನೀಡಿದ್ದಾರೆ. ಈ ಟೂರ್ನಮೆಂಟ್‌'ಗೆ ಜನರ ವಿರೋಧ ವ್ಯಕ್ತವಾಗುತ್ತಿದೆ.