ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ದಾಖಲೆ ಸೃಷ್ಟಿಸಿದ ಭತ್ತ ಕಟಾವು! | Suvarna News | Kannada News

Published : Feb 10, 2025, 07:00 PM IST

ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ ಭತ್ತ ಕಟಾವು ದಾಖಲೆ ಸೃಷ್ಟಿಸಿದೆ. ಏಕಕಾಲದಲ್ಲಿ ಒಂದು ಸಾವಿರ ಜನರಿಂದ ಭತ್ತ ಕಟಾವು ಮಾಡಿ ಸಂಭ್ರಮಿಸಿದ್ದಾರೆ. ಬೆಳ್ತಂಗಡಿಯ ಬೆಳಾಲು ಗ್ರಾಮದ ಅನಂತೋಡಿ ಸಾಂಪ್ರಾದಾಯಿಕ ಕೃಷಿ ವೈಭವಕ್ಕೆ ಸಾಕ್ಷಿಯಾಯ್ತು. ಆ ಮೂಲಕ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರೋದಕ್ಕೆ 'ಯುವ ಸಿರಿ' ಕಾರ್ಯಕ್ರಮ ಸಜ್ಜಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೇರಿದ ಅನಂತೋಡಿ ದೇವರ ಗದ್ದೆಯಲ್ಲಿ, ಬದುಕು ಕಟ್ಟೋಣ ಬನ್ನಿ ತಂಡದಿಂದ ಗತ ಕಾಲದ ಕೃಷಿ ವೈಭವವನ್ನ ನೆನಪಿಸುವ ಭತ್ತ ಕಟಾವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಾದ್ಯ ಘೋಷ, ಚೆಂಡೆ, ಸಾಂಪ್ರಾದಾಯಿಕ ಉಡುಗೆ ತೊಡುಗೆಗಳೊಂದಿಗೆ ನಡೆದ ಭತ್ತ ಕಟಾವು ಮಾಡಲಾಯ್ತು. ಯುವ ಜನತೆಯನ್ನ ಕೃಷಿ ಚಟುವಟಿಕೆಯತ್ತ ಸೆಳೆಯಲು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ, ಎಸ್ ಡಿಎಂ ವಿದ್ಯಾ ಸಂಸ್ಥೆ ಸೇರಿದಂತೆ ಸಾವಿರಕ್ಕೂ ಅಧಿಕ ಜನರು ಕೃಷಿ ಕೆಲಸ ಮಾಡಿದರು. ಕಟಾವು ಮಾಡಿದ ತೆನೆಯನ್ನ ಪಲ್ಲಕ್ಕಿಯಲ್ಲಿರಿಸಿ ಭವ್ಯ ಮೆರವಣಿಗೆ ಮಾಡಲಾಯ್ತು. ಅನಂತೋಡಿ ದೇವಸ್ಥಾನದ ಮುಂಭಾಗ ಭತ್ತ ತೆನೆ ಬೆರ್ಪಡಿಸುವ ಕಾರ್ಯ ನಡೆಯಿತು. ಯುವಸಿರಿ ಮೂಲಕ ಬಂದ ಅಕ್ಕಿಯನ್ನ ವಿವಿಧ ದೇವಸ್ಥಾನಗಳ ಅನ್ನದಾನ ಹಾಗು ನೈವೇದ್ಯಕ್ಕೆ ಉಚಿತವಾಗಿ ಸಮರ್ಪಣೆ ಮಾಡಲಾಯ್ತು Suvarna News | Kannada News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
25:29ಮುಟ್ಟಿ ಕೆಟ್ಟ ಮುತ್ಯಾ: ಲೈಂಗಿಕ ದೌರ್ಜನ್ಯವೆಸಗಿದನಾ ಮುತ್ಯಾ..? ಯಾರು ಈ ದೇವಮಾನವ
01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
Read more