ಗ್ಯಾರಂಟಿ ಯೋಜನೆಗಾಗಿ ಪೆಟ್ರೋಲ್ ಬೆಲೆ ಏರಿಸಿದ್ರಾ..? ಎಡವಟ್ಟಿಗೆಲ್ಲಾ ಗ್ಯಾರಂಟಿನೇ ಕಾರಣನಾ..?

Jun 17, 2024, 5:55 PM IST

ಜನರಲ್ ಎಲೆಕ್ಷನ್ ಮುಗಿದಿದ್ದೇ ಮುಗಿದಿದ್ದು, ಶ್ರೀಸಾಮಾನ್ಯನ ಜೇಬು ಸುಡೋಕೆ ಶುರುವಾಗಿದೆ. ಆದ್ರೆ ಈ ಸಮಸ್ಯೆ ಕಾಡ್ತಾ ಇರೋದು ಸಧ್ಯಕ್ಕೆ ಕರ್ನಾಟಕದ ಜನರನ್ನ ಮಾತ್ರ. ಯಾಕಂದ್ರೆ, ಗ್ಯಾರಂಟಿ ಯೋಜನೆಗೆ(Guarantee scheme) ದುಡ್ಡು ಜೋಡಿಸೋಕೆ ಗಾಯದ ಮೇಲೆ ಬರೆ ಎಳೆಯೋಕೆ ಮುಂದಾದಂತಿದೆ, ಸಿದ್ದರಾಮಯ್ಯನೋರ(Siddaramaiah) ಸರ್ಕಾರ.ಸರಿಸುಮಾರ 30% ಪೆಟ್ರೋಲ್ ಬೆಲೆ(Petrol-diesel prices hike) ಏರಿಕೆಯಾಗಿದೆ. ಇಷ್ಟೇ ಅಲ್ಲ, ಇನ್ನೂ ಶಾಕ್ ಮೇಲೆ ಶಾಕ್ ಕಾದಿದೆ ಅನ್ನೋ ಭಯಾನಕ ಭವಿಷ್ಯ ಬೇರೆ ಕೇಳುಸ್ತಾ ಇದೆ. ರಾಜ್ಯದಲ್ಲಿ ಸರ್ಕಾರ(State government) ನಡೆಸ್ತಾ ಇರೋದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್. ಈ ಕಾಂಗ್ರೆಸ್ ಆಡಳಿತಕ್ಕೆ ಬರೋದ್ರಲ್ಲಿ, ಅತಿ ಮಹತ್ವದ ಪಾತ್ರವಹಿಸಿದ ಸಂಗತಿ ಏನು ಅಂತ ಕೇಳಿದ್ರೆ, ಅನೇಕ ಮಂದಿ ಹೇಳೋದೇ, ಗ್ಯಾರಂಟಿ ಘೋಷಣೆ ಅಂತ. ರಾಜ್ಯದ ಜನಕ್ಕೆ ಗ್ಯಾರಂಟಿ ಭರವಸೆ ಕೊಡೋ ಮೂಲಕ, ಕಾಂಗ್ರೆಸ್ ಹೊಸ ಅಲೆ ಸೃಷ್ಟಿಸಿತ್ತು. ಒಂದೆಡೆ ಆಗಿನ ಬಿಜೆಪಿ ಸರ್ಕಾರದ ವಿರುದ್ಧ ಇದ್ದ ಅಸಮಾಧಾನ, ಮತ್ತೊಂದು ಕಡೆ ಬದಲಾವಣೆಯ ಬಯಕೆ, ಅದೆರಡರ ಜೊತೆ, ಎಲ್ಲರಿಗೂ ಫ್ರೀ, ಫ್ರೀ ಅನ್ನೋ ಸಿದ್ದರಾಮಯ್ಯನೋರ ಅಭಯ.

ಇದನ್ನೂ ವೀಕ್ಷಿಸಿ:  ಹೆಚ್ಚಿನ ವಿಚಾರಣೆಗಾಗಿ ಪೊಲೀಸರ ವಶದಲ್ಲಿ ದರ್ಶನ್‌ ಗ್ಯಾಂಗ್‌: ಪೊಲೀಸರು ಕೊಟ್ಟ ಆ 6 ಕಾರಣಗಳೇನು?