Feb 3, 2022, 10:23 AM IST
ತುಮಕೂರು(ಫೆ.03): ಕೇವಲ ರಾಜಧಾನಿ ಬೆಂಗಳೂರಿನಲ್ಲಿ ಅಷ್ಟೇ ಅಲ್ಲ ತುಮಕೂರಿನಲ್ಲೂ ಟೋಯಿಂಗ್‌ನ ಬಿಸಿ ತಟ್ಟುತ್ತಿದೆ. ಹೌದು, ನಗರದಲ್ಲೂ ಕೂಡ ಟ್ರಾಫಿಕ್ ಪೊಲೀಸರು ಮನಸೋ ಇಚ್ಛೆ ಟೋಯಿಂಗ್ ಮಾಡುತ್ತಿದ್ದಾರೆ. ಟ್ರಾಫಿಕ್ ಪೊಲೀಸರ ಈ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತುಮಕೂರು ಉಪನೊಂದಣಾಧಿಕಾರಿ ಕಚೇರಿ ಬಳಿ ಟೋಯಿಂಗ್ ನಡೆದಿದೆ. ನೋ ಪಾರ್ಕಿಂಗ್ ಜಾಗ ಬಿಟ್ಟು ಬೇರೆ ಕಡೆ ನಿಂತಿದ್ದ ವಾಹನಗಳನ್ನೂ ಕೂಡ ಟೋಯಿಂಗ್ ಮಾಡಲಾಗಿದೆ. ಟೋಯಿಂಗ್ ಮಾಡುತ್ತಿದ್ದ ಪೊಲೀಸರನ್ನ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕರ ಪ್ರಶ್ನೆಗಳಿಗೆ ಟ್ರಾಫಿಕ್ ಪೊಲೀಸರು ತಬ್ಬಿಬ್ಬಾಗಿದ್ದಾರೆ.
ಟೋಯಿಂಗ್‌ಗೆ ಬ್ರೇಕ್ ಹಾಕಿದ ಸರ್ಕಾರ: ನಿಟ್ಟುಸಿರು ಬಿಟ್ಟ ಸಿಲಿಕಾನ್ ಸಿಟಿ ಮಂದಿ..!