ಸೌಜನ್ಯಗೆ ನ್ಯಾಯ: ಧರ್ಮಸ್ಥಳ ಭಕ್ತರಿಂದಲೇ ಬೃಹತ್ ಪ್ರತಿಭಟನೆ!

Aug 4, 2023, 11:31 AM IST

ದಕ್ಷಿಣ ಕನ್ನಡ ಮತ್ತೆ ಸೌಜನ್ಯ ಅತ್ಯಾಚಾರ ಕೇಸ್(Saujanya rape case) ಮತ್ತೆ ಸದ್ದು ಮಾಡುತ್ತಿದೆ. 12 ವರ್ಷಗಳ ಬಳಿಕ ಮತ್ತೆ  ಅತ್ಯಾಚಾರಿಗಳಿಗೆ ಶಿಕ್ಷೆ ಆಗಬೇಕು ಅಂತಾ ಸಂಘಟನೆಗಳು ಪಟ್ಟು ಹಿಡಿದಿವೆ. ಇದರ ಬೆನ್ನಲ್ಲೇ ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ ದೊಡ್ಡ ಸಮಾವೇಶದ ಮೂಲಕ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದೆ. ಉಜಿರೆಯ ಶ್ರೀಜನಾರ್ಧನ ಸ್ವಾಮಿ ರಥಬೀದಿಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದ್ದು, ಧರ್ಮಸ್ಥಳ ಕ್ಷೇತ್ರ ಮತ್ತು ವೀರೇಂದ್ರ ಹೆಗ್ಗಡೆ(Virendra Heggade) ವಿರುದ್ಧ ಅವಹೇಳನಕಾರಿ ಮಾತುಗಳು ನಿಲ್ಲಿಸಬೇಕು. ಸೌಜನ್ಯಗೆ ನ್ಯಾಯಕೊಡಸಬೇಕು ಅಂತಾ ಸಭೆಯಲ್ಲಿ ಆಗ್ರಹ ವ್ಯಕ್ತವಾಗಲಿದೆ. 2012ರ ಅಕ್ಟೋಬರ್‌ 9 ರಂದು ಕಾಲೇಜಿಗೆ ಹೋಗಿದ್ದ ಸೌಜನ್ಯ, ಅಕ್ಟೋಬರ್ 10 ರಂದು ಧರ್ಮಸ್ಥಳ ಪಾಂಗಾಳ ಸಮೀಪ ಕಾಡು ದಾರಿಯಲ್ಲಿ ಪತ್ತೆಯಾಗಿದ್ಳು. ಅತ್ಯಾಚಾರ ಮಾಡಿ ಕೊಲೆಗೈದ್ದಾರೆ ಅಂತಾ ಕುಟುಂಬಸ್ಥರು ಆರೋಪಿಸಿದ್ರು. ಅಲ್ದೆ ಬೆಳ್ತಂಗಡಿ ಪೊಲೀಸರು ಸಂತೋಷ್‌ರಾವ್ ಎಂಬಾತನನ್ನು ಬಂಧಿಸಿದ್ರು. ಸಿಐಡಿ ಬಳಿಕ ಸಿಬಿಐ ಕೂಡ ತನಿಖೆ ನಡೆಸಿ 2 ತಿಂಗಳ ಹಿಂದೆ ಸಂತೋಷ್‌ರಾವ್ ದೋಷಮುಕ್ತ ಎಂದು ತೀರ್ಪು ಪ್ರಕಟಿಸಿತ್ತು. ಯಾವಾಗ ಸಿಬಿಐ ತೀರ್ಪು ಹೊರಬಿತ್ತು ಮತ್ತೆ ದೊಡ್ಡ ವಿವಾದ ಎದ್ದಿದೆ. 

ಇದನ್ನೂ ವೀಕ್ಷಿಸಿ: ಕರಾವಳಿಯಲ್ಲಿ ಹಿಂದೂ ಯುವತಿಯರ ವಿಡಿಯೋ ಕಿಚ್ಚು: SIT ತನಿಖೆಗೆ ಪಟ್ಟು.. ಸಂಘಟನೆಗಳಿಂದ ಪ್ರೊಟೆಸ್ಟ್..!