May 31, 2024, 9:22 AM IST
100ಕ್ಕೂ ಹೆಚ್ಚು ಸಂಘಟನೆಗಳು ಸುಮಾರು 10,000ಕ್ಕೂ ಹೆಚ್ಚು ಮಹಿಳೆಯರು(Women) ಹೋರಾಟವನ್ನು ಮಾಡಿದ್ದಾರೆ. ಹಾಸನದ(Hassan) ಕಡೆಗೆ.. ಸ್ತಬ್ಧವಾಯ್ತು ಪ್ರಜ್ವಲ್(Prajwal Revanna) ಕ್ಷೇತ್ರ.. ಹೆಜ್ಜೆ ಹೆಜ್ಜೆಯಲ್ಲೂ ಆಕ್ರೋಶ ವ್ಯಕ್ತವಾಗಿದೆ. ಆ ಹೆಣ್ಣು ಮಕ್ಕಳ ಕಣ್ಣಲ್ಲಿದ್ದು ಒಂದೇ ಕಿಡಿ. ರಾಜ್ಯದೆಲ್ಲೆಡೆ ಆಕ್ರೋಶದ ಕಿಚ್ಚು ಧಗಧಗನೆ ಹೊತ್ತಿ ಉರಿಯುತ್ತಿದೆ. ಆದರೆ ಅಲ್ಲಿ ದೊಡ್ಡ ಗೌಡರ ಕುಟುಂಬದಲ್ಲೇ ಮಾತ್ರ ನಿಗೂಢ ಮೌನ ಆವರಿಸಿಕೊಂಡಿದೆ. ಅದರಲ್ಲೂ ಹೆಚ್ ಡಿ ಕುಮಾರಸ್ವಾಮಿ ಈ ಹಿಂದೆ ಹಾಸನ ಫೈಲ್ಸ್ ಬಗ್ಗೆ ಹೇಳಿದ್ದೇನು ಗೊತ್ತಾ..? 34 ದಿನ ನಾಪತ್ತೆಯಾಗಿದ್ದ ಪ್ರಜ್ವಲ್ ಈಗ ಪ್ರತ್ಯಕ್ಷ ಆಗ್ತಿದ್ದಾನೆ. ಈಗ ಎಸ್ಐಟಿ ಮುಂದೆ ಸರೆಂಡರ್ ಕೂಡ ಆಗಿದ್ದಾನೆ. ಕಾಮಕಾಂಡದ ಪ್ರೆನ್‌ಡ್ರೈವ್ ಪ್ರಕರಣ ಬೆಳಕಿಗೆ ಬಂದಾಗಿನಿಂದ, ರಾಜ್ಯಾದ್ಯಂತ ನಡೆದಿರುವ ಪ್ರತಿಭಟನೆಗಳು(Protest) ಒಂದೆರಡಲ್ಲ. ಈಗ ಪ್ರಜ್ವಲ್ ಮರಳಿ ಬೆಂಗಳೂರಿಗೆ ಬರ್ತಿದ್ದಾನೆ. ಹಾಗಾದ್ರೆ ಪ್ರತಿಭಟನೆಗು ಇಲ್ಲಿಗೆನೇ ನಿಲ್ಲುತ್ತಾ ಅಥವಾ ಇನ್ನಷ್ಟು ಉಗ್ರ ರೂಪ ಪಡೆದುಕೊಳ್ಳುತ್ತಾ ಎಂಬುದು ತಿಳಿದಿಲ್ಲ. ಪ್ರಜ್ವಲ್ ರೇವಣ್ಣ ಕಾಮಕಾಂಡ ಬಟಾಬಯಲಾಗಿದ್ದ ಕ್ಷಣದಿಂದ ಜನರು ರೊಚ್ಚಿಗೆದ್ದಿದ್ದರು. ದಿನದಿಂದ ದಿನಕ್ಕೆ ಇದೇ ಪ್ರತಿಭಟನೆ ರೂಪ ಜ್ವಾಲಾಮುಖಿಯಿಂತೆ ಉಗ್ರ ರೂಪ ತಾಳುತ್ತ ಹೋಯಿತು.
ಇದನ್ನೂ ವೀಕ್ಷಿಸಿ: ಕೊಲೆಗಾರನನ್ನು ಒಂದು ವರ್ಷದಲ್ಲೇ ಕಣ್ಣಮುಂದೆ ತಂದು ನಿಲ್ಲಿಸುತ್ತೇನೆ..ನಿಜವಾಯ್ತು ವರ್ತೆ ಪಂಜುರ್ಲಿ ನುಡಿ!