ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಬೃಹತ್ ಪ್ರತಿಮೆ ಲೋಕಾರ್ಪಣೆಗೆ ಸಿದ್ಧವಾಗಿದ್ದು, ಈ ಕುರಿತು ಸಚಿವ ಅಶ್ವತ್ಥ್ ನಾರಾಯಣ್ ವಿವರಣೆ ನೀಡಿದ್ದಾರೆ.
ನವೆಂಬರ್ 11ರಂದು ಪ್ರತಿಮೆಯನ್ನು ಪ್ರಧಾನಿ ನರೆಂದ್ರ ಮೋದಿ ಲೋಕಾರ್ಪಣೆ ಮಾಡಲಿದ್ದು, ಈ ವಿಚಾರವಾಗಿ ಅಶ್ವತ್ಥ್ ನಾರಾಯಣ್ ಮಾತಾಡಿದ್ದಾರೆ. ನಾಡಪ್ರಭು ಕೆಂಪೇಗೌಡರು ಇಡೀ ನಾಡಿಗೆ ಬಹಳಷ್ಟು ಭಾವನಾತ್ಮಕವಾಗಿರುವ ವ್ಯಕ್ತಿತ್ವ ಮತ್ತು ಒಂದು ಸಾಮಂತ ರಾಜರು. ಇವರ ಕೊಡುಗೆಯನ್ನು ಪ್ರತಿದಿನ ಪ್ರತಿಯೊಬ್ಬ ಕನ್ನಡಿಗನು ಸ್ಮರಿಸಿಕೊಳ್ಳುತ್ತಾ ಇರುತ್ತಾನೆ ಎಂದರು. ಬೆಂಗಳೂರನ್ನು ಕಟ್ಟಿದ ಮಹಾನ್ ವ್ಯಕ್ತಿ ಅವರ ಹೆಸರು ವಿಮಾನ ನಿಲ್ದಾಣಕ್ಕೆ ನಾಮಕರಣವಾಗಿರುವುದರಿಂದ, ಅವರ ಪ್ರತಿಮೆ ಇಲ್ಲಿ ಸ್ಥಾಪನೆ ಆಗಬೇಕಿತ್ತು ಎನ್ನುವುದು ಬಹಳ ದಿನದ ಬೇಡಿಕೆಯಾಗಿತ್ತು ಎಂದು ತಿಳಿಸಿದರು. ಹಾಗೂ ಅವರು ಒಬ್ಬ ಶೂರ, ಕುಸ್ತಿಗಾರ, ಎಲ್ಲಾ ಸಾಮರ್ಥ್ಯ ಅವರಲ್ಲಿ ಅಡಗಿತ್ತು. ಜೊತೆಯಲ್ಲಿ ಕೆಂಪೇಗೌಡರು ಒಬ್ಬ ಉತ್ತಮ ಆಡಳಿತಗಾರ ಎಂದರು.