ಸಿಜೇರಿಯನ್ (cesarean) ಮಾಡಿಸಿಕೊಂಡಿದ್ದ ಬಾಣಂತಿಯರ ಹೊಲಿಗೆಗಳು ಏಕಾಏಕಿ ಬಿಚ್ಚಿಕೊಂಡಿದ್ದರಿಂದಾಗಿ ತೊಂದರೆ ಅನುಭವಿಸಿ ನರಳಾಡಿದ ಘಟನೆ ವಿಜಯಪುರ (Vijayapura) ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ವಿಜಯಪುರ (ಮೇ. 15): ಸಿಜೇರಿಯನ್ (cesarean) ಮಾಡಿಸಿಕೊಂಡಿದ್ದ ಬಾಣಂತಿಯರ ಹೊಲಿಗೆಗಳು ಏಕಾಏಕಿ ಬಿಚ್ಚಿಕೊಂಡಿದ್ದರಿಂದಾಗಿ ತೊಂದರೆ ಅನುಭವಿಸಿ ನರಳಾಡಿದ ಘಟನೆ ವಿಜಯಪುರ (Vijayapura) ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ.
ಜಿಲ್ಲಾ ಆಸ್ಪತ್ರೆಯಲ್ಲಿ ಮೇ 1ರಿಂದ 13ರವರೆಗೆ 156 ಮಂದಿಗೆ ಸಿಜೇರಿಯನ್ ಮಾಡಲಾಗಿದೆ. ಈ ಪೈಕಿ 18 ಮಂದಿಗೆ ಚರ್ಮದ ನಂಜು ಉಂಟಾಗಿ ಹೊಲಿಗೆಗಳು ಬಿಚ್ಚಿವೆ. ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿ ಪ್ರಸಾರ ಮಾಡುತ್ತಿದ್ದಂತೆ, ಡಿಸಿ ವಿಜಯ ಮಹಾಂತೇಶ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದರು. ನಮ್ಮನ್ನು ಕಾಪಾಡಿ ಸರ್ ಎಂದು ಬಾಣಂತಿಯರು ಕೈ ಮುಗಿದು ಬೇಡಿಕೊಂಡಿದ್ದಾರೆ.