Nov 11, 2022, 2:47 PM IST
ಬೆಂಗಳೂರಿನ ರಸ್ತೆ ಬದಿಯಿಂದ ತಮಗೆ ಜೈಕಾರ ಹಾಕುತ್ತಿದ್ದ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಬೃಹತ್ ಸಮಾವೇಶವನ್ನು ಸ್ವಾಗತಿಸಲು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಕಾರಿನಿಂದ ಇಳಿದರು. ವಿಧಾನಸೌಧದ ಸಮೀಪವಿರುವ ಪ್ರಮುಖ ಟ್ರಾಫಿಕ್ ಜಂಕ್ಷನ್'ನಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರ ಗುಂಪುಗಳತ್ತ ಅವರು ಉತ್ಸಾಹದಿಂದ ಕೈ ಬೀಸುತ್ತಿರುವುದು ಕಂಡು ಬಂದಿತು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣಕ್ಕೆ ‘ವಂದೇ ಭಾರತ್’ ಎಕ್ಸ್‌ಪ್ರೆಸ್ ಮತ್ತು ‘ಭಾರತ ಗೌರವ್ ಕಾಶಿ ದರ್ಶನ’ ರೈಲುಗಳನ್ನು ಫ್ಲ್ಯಾಗ್ ಆಫ್ ಮಾಡಲು ತೆರಳುತ್ತಿದ್ದಾಗ ಶಿಷ್ಟಾಚಾರಕ್ಕೆ ಬ್ರೇಕ್ ಬಿದ್ದಿದ್ದು, ಪ್ರಧಾನಿ ತಮ್ಮ ಕಾರಿನ ರನ್ನಿಂಗ್ ಬೋರ್ಡ್ ಮೇಲೆ ನಿಂತು, 'ಮೋದಿ, ಮೋದಿ' ಘೋಷಣೆಗಳನ್ನು ಕೇಳುತ್ತಿದ್ದ ಜನರನ್ನು ಸ್ವಾಗತಿಸಿದರು.
ಬಿಜೆಪಿ ಸರ್ಕಾರ ಕೆಂಪೇಗೌಡ ಅನುಯಾಯಿಯೇ? ವಿಪಕ್ಷ ನಾಯಕ ಸಿದ್ಧರಾಮಯ್ಯ ವಾಗ್ದಾಳಿ