BIG 3: ನೀರು ತರಲು ಕೆಲಸ ಬಿಡ್ಬೇಕು, ಮಕ್ಕಳು ಶಾಲೆಗೆ ಲೇಟಾಗಿ ಹೋಗ್ಬೇಕು!

Nov 29, 2022, 10:03 PM IST

ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕುಡಕಿ ಗ್ರಾಮದಲ್ಲಿ. ಇಲ್ಲಿನ ಜನರ ನೀರಿನ ಬವಣೆ ಇದು. ಹಾಗಂತ, ಗ್ರಾಮದಲ್ಲಿ ನೀರಿಲ್ಲ ಅಂತಲ್ಲ. ನೀರಿದೆ. ಆದ್ರೆ ಅದು ಕುಡಿಯಲು ಯೋಗ್ಯವಿಲ್ಲ. ಇನ್ನು ಗ್ರಾಮದಿಂದ ಒಂದು ಕಿಲೋ ಮೀಟರ್ ದೂರದಲ್ಲಿನ ಹಳ್ಳದಲ್ಲಿ ತೋಡಲಾದ ಬೋರವೆಲ್ನಲ್ಲಿ ಕುಡಿಯಲು ಯೋಗ್ಯವಾದ ನೀರಿದೆ. ಆ ಒಂದೇ ಒಂದು ಬೋರವೆಲ್ ಜನರ ನೀರಿನ ದಾಹ ತಣಿಸಬೇಕು. ಈ ಗ್ರಾಮದ ಜನರಲ್ಲಿ ಬಹುತೇಕರು ಕೂಲಿಗಾಗಿ ಮಹಾರಾಷ್ಟ್ರಕ್ಕೆ ಗುಳೆ ಹೋಗುತ್ತಾರೆ. ಇನ್ನೂ ಊರಲ್ಲಿ ಉಳಿಯು ವುದು ವಯೋವೃದ್ದ ತಂದೆ ತಾಯಿಗಳು,ಶಾಲೆಗೆ ಹೋಗುವ ಮಕ್ಕಳು, ಊರಲ್ಲಿ ಉಳಿದವರ ನೀರಿನ ಬವಣೆ ಹೇಳ ತೀರದು. ಒಂದು ಕಿಲೋ ಮೀಟರ್ ವರೆಗೆ ಪೈಪ್ ಲೈನ್ ಸೌಲಭ್ಯ ಕಲ್ಪಿಸಿ ಮನೆ ಮನೆಗೆ ನೀರಿನ ವ್ಯವಸ್ಥೆ ಕಲ್ಪಿಸಿದ್ರೆ ಜನರ ತಂದರೆ ನೀಗುತ್ತೆ. ಇಲ್ಲ ಅಲ್ಲಲ್ಲಿ ಸಣ್ಣ ಸಣ್ಣ ವಾಟರ್ ಟ್ಯಾಂಕ್ ನಿರ್ಮಿಸಿದರೂ ಆಯಾ ಕೇರಿಯ ಜನ ಅಲ್ಲಲ್ಲೇ ನೀರು ಪಡೆಯಬಹುದು. ಈ ಸಣ್ಣ ಕೆಲಸ ಕೂಡ ಮಾಡೋಕೆ ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳಿಗೂ ಇನ್ನೂ ಆಗಿಲ್ಲ. ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್3ಯಲ್ಲಿ ವರದಿ ಪ್ರಸಾರ ಆದ್ಮೇಲಾದ್ರೂ ಇಲ್ಲಿನ ಅಧಿಕಾರಿಗಳು ಈ ಕುಡಿಯೋ ನೀರಿನ ಸಮಸ್ಯೆ ಬಗೆ ಹರಿಸ್ತಾರ ನೋಡೋಣ.. ಇಲ್ಲದಿದ್ರೆ ಬಿಗ್3 ಬುಲೆಟ್ ಹಾರೋದು ಪಕ್ಕಾ.