* ಆಂಧ್ರಪ್ರದೇಶದಲ್ಲೂ ಮುಂದುವರಿದ ಮಳೆ
* ನೀರಿನಲ್ಲಿ ತೇಲಾಡುತ್ತಿರುವ ಬೈಕ್-ಕಾರುಗಳು
* ಮಳೆಯ ಅವಾಂತರದಿಂದ ಜನಜೀವ ಸಂಪೂರ್ಣ ಅಸ್ತವ್ಯಸ್ತ
ರಾಯಚೂರು(ಜೂ.27): ನೆರೆಯ ಆಂಧ್ರಪ್ರದೇಶದಲ್ಲೂ ಕೂಡ ವರುಣನ ಅಬ್ಬರ ಜೋರಾಗಿದೆ. ಮಂತ್ರಾಲಯದ ಕಲ್ಯಾಣ ಮಂಟಪಕ್ಕೆ ಮಳೆ ನೀರು ನುಗ್ಗಿದ ಪರಿಣಾಮ ಮದುಗೆ ಬಂದವರು ಪಡಬಾರದ ಸಂಕಷ್ಟಗಳನ್ನ ಎದುರಿಸುವಂತಾಗಿದೆ. ಅಪಾರ ಪ್ರಮಾಣದ ನೀರು ಬಂದಿದ್ದರಿಂದ ರಸ್ತೆಯಲ್ಲಿದ್ದ ಕಾರು, ಬೈಕ್‌ಗಳು ನೀರಿನಲ್ಲಿ ತೇಲಾಡುತ್ತಿವೆ. ಇನ್ನೂ ಮಂತ್ರಾಲಯದಲ್ಲಿರುವ ಕರ್ನಾಟಕ ಭವನಕ್ಕೂ ಕೂಡ ನೀರು ನುಗ್ಗಿದೆ. ಮಳೆಯ ಅವಾಂತರದಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.