ರಾಯಚೂರು ಏರ್ಪೋರ್ಟ್ ನಿರ್ಮಾಣ: 30 ದಿನಗಳೊಳಗೆ ಮನೆ ಖಾಲಿ ಮಾಡುವಂತೆ ನೋಟಿಸ್

Dec 6, 2023, 1:15 PM IST

ರಾಯಚೂರು(ಡಿ.06):  ಯಾವುದೇ ಭೂಸ್ವಾಧೀನ ಮಾಡಿಕೊಳ್ಳಬೇಕಾದ್ರೆ ಪರಿಹಾರ ನೀಡಿ ನೋಟೀಸ್ ಜಾರಿ ಮಾಡಬೇಕು. ಆದ್ರೆ ರಾಯಚೂರು ಸಹಾಯಕ ಆಯುಕ್ತರು, ಯಾವುದೇ ಪರಿಹಾರ ಘೋಷಣೆ ಮಾಡದೇ, ಅಂತಿಮ ನೋಟಿಸ್ ಜಾರಿ ಮಾಡಿ 30 ದಿನಗಳಲ್ಲಿ ಮನೆ ಖಾಲಿ ಮಾಡಲು ಆದೇಶ ಮಾಡಿದೆ. ಇದು 108 ಕುಟುಂಬಗಳ ನಿದ್ದೆಗೆಡಿಸಿದೆ.

ಇಲ್ನೋಡಿ.. ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ನಡೀತಿದೆ.. ಜಿಲ್ಲೆಯಲ್ಲೊಂದು ಏರ್ಪೋರ್ಟ್ ನಿರ್ಮಾಣ ಆಗುತ್ತೆ.. ವಿಮಾನ ಹಾರಾಡುತ್ತೆ ಅಂದ್ರೆ ಯಾರಿಗ್ ತಾನೇ ಖುಷಿಯಾಗಲ್ಲ.. ಖುಷಿ ವಿಚಾರವೇ.. ಆದ್ರೆ, ದುರಂತ ಏನ್ ಗೊತ್ತಾ ಇಲ್ಲಿ ಏರ್ಪೋರ್ಟ್ ನಿರ್ಮಾಣಕ್ಕೆ ಬಡವರನ್ನ ಒಕ್ಕಲೆಬ್ಬಿಸಲು ಹೊರಟಿದ್ದು..  ಏರ್ಪೋರ್ಟ್ ನಿರ್ಮಾಣಕ್ಕೆ ಅಧಿಕಾರಿಗಳು 105 ಕುಟುಂಬಗಳಿಗೆ ಏಕಾಏಕಿ ನೋಟಿಸ್ ಕೊಟ್ಟಿದ್ದಾರೆ. ರಾಯಚೂರು ತಾಲೂಕಿನ ಯರಮರಸ್ ದಂಡು ಗ್ರಾಮಸ್ಥರಿಗೆ ಪರ್ಯಾಯ ಜಾಗವನ್ನೂ ತೋರಿಸದೇ, ಪರಿಹಾರವನ್ನೂ ನೀಡದೇ 30 ದಿನಗಳ ಒಳಗೆ ಜಾಗ ಖಾಲಿ ಮಾಡುವಂತೆ ಅಧಿಕಾರಿಗಳು ನೋಟಿಸ್ ಕೊಟ್ಟಿದ್ದಾರೆ.

ದಾವಣಗೆರೆ: 419 ಕುಟುಂಬಗಳ ಎತ್ತಂಗಡಿ, ಕುಡಿಯೋ ನೀರಿಗೂ ಜನರ ಪರದಾಟ..!

ಏಗನೂರು ಗ್ರಾಮದ ಸರ್ವೇ ನಂಬರ್ 254ರಲ್ಲಿ ಇದ್ದ 105 ಮನೆಗಳಿಗೆ ಹಾಗೂ ಯರಮರಸ್ ಗ್ರಾಮದ ಸರ್ವೇ ನಂ.55ರಲ್ಲಿನ 3 ಮನೆಗಳಿಗೆ ಖಾಲಿ ಮಾಡುವಂತೆ ಅಂತಿಮ ನೋಟಿಸ್ ಜಾರಿಯಾಗಿದೆ. ಏಕಾಏಕಿ ಜಿಲ್ಲಾಡಳಿತ  ನೋಟಿಸ್ ಮಾಡಿದ್ದು ಗ್ರಾಮಸ್ಥರನ್ನ ಕಂಗಾಲಾಗಿಸಿದೆ.

ಪರಿಹಾರ ನೀಡದೇ, ವಸತಿಗೆ ಪರ್ಯಾಯ ಜಾಗವನ್ನೂ ತೋರಿಸದೇ ಏಕಾಏಕಿ ಮನೆ ಖಾಲಿ ಮಾಡಿ  ಅಂದ್ರೆ ಮಾಡೋದು ಹೇಗೆ ಅನ್ನೋದು ಜನರ ಪ್ರಶ್ನೆ.. ಅಷ್ಟಕ್ಕೂ ಈ ಜನರು ವಾಸವಿದ್ದ ಈ ಜಾಗ ಸರ್ಕಾರಕ್ಕೆ ಸೇರಿದ್ದಂತೆ..ದಶಕಗಳಿಂದ ಸರ್ಕಾರಿ ಜಾಗದಲ್ಲಿ ಮನೆಕಟ್ಟಿಕೊಂಡಿದ್ದಾರೆ..  ಇದೇ ಕಾರಣಕ್ಕೆ ಸರ್ಕಾರ ಪರಿಹಾರ ನೀಡದೇ ನಮ್ಮನ್ನು ಬಿದಿಗೆ ತಳ್ಳಲು ಹೊರಟಿದೆ.. ನಾವು ಜಾಗ ಖಾಲಿ ಮಾಡಲ್ಲ.. ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡೋವರೂ ಜಾಗ ಖಾಲಿ ಮಾಡಲ್ಲ ಎನ್ನುತ್ತಿದ್ದಾರೆ.

ಚಿತ್ರದುರ್ಗ: ಸರ್ಕಾರಿ ಗೋಮಾಳ ಕಬಳಿಸಲು ಅಧಿಕಾರಿಗಳು, ರಿಯಲ್ ಎಸ್ಟೇಟ್ ಏಜೆಂಟರಿಂದ ಸ್ಕೆಚ್‌?

ಇನ್ನು ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿದ ರಾಯಚೂರು ಸಹಾಯಕ ಆಯುಕ್ತ ಮೈಹಬೂಬಿ, ವಿಮಾನ ನಿಲ್ದಾಣಕ್ಕಾಗಿ 315 ಎಕರೆ 19 ಗುಂಟೆ ಸರ್ಕಾರಿ ಜಾಗ ಲಭ್ಯವಿದೆ. ಯರಮರಸ್ ಮತ್ತು ಏಗನೂರು ಭೂ ಪ್ರದೇಶದಲ್ಲಿ 20 ಎಕರೆ 09 ಗುಂಟೆ ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ. ಇದ್ರ ನಡುವೆ ಏಗನೂರು ಗ್ರಾಮದ ಸರ್ಕಾರಿ ಜಾಗದಲ್ಲಿ 106 ಮನೆಗಳು ಇದ್ದು, ಅವರಿಗೆ ಅಂತಿಮ ನೋಟಿಸ್ ಜಾರಿಯಾಗಿದೆ. ಗ್ರಾಮಸ್ಥರು ದಾಖಲೆಗಳನ್ನು ನಮ್ಮ ಕಚೇರಿಗೆ ನೀಡಿದ್ದಾರೆ. ಆ ದಾಖಲೆಗಳು ಪರಿಶೀಲನೆ ಹಂತದಲ್ಲಿ ಇದೆ ಎಂದರು.

ಗ್ರಾಮಸ್ಥರ ದಾಖಲೆಗಳ ಪರಿಶೀಲನೆ ಹಂತ ನಡೀತಿದೆ ಅನ್ನೋ ಅಧಿಕಾರಿಗಳು, 30 ದಿನಗಳಲ್ಲಿ ಮನೆ ಖಾಲಿ ಮಾಡಿ ಅಂದಿದ್ಯಾಕೆ..? ಸೂರಿಲ್ಲದ ಈ ಕುಟುಂಬಗಳು ಎಲ್ಲಿಗೆ ಹೋಗಬೇಕು..? ಹತ್ತಾರು ವರ್ಷಗಳಿಂದ ವಾಸವಿದ್ದ 108 ಕುಟುಂಬಗಳಿಗೆ ಜಿಲ್ಲಾಡಳಿತ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕಿದೆ.