Nov 17, 2021, 2:29 PM IST
ಧಾರವಾಡ (ನ. 17): ಗ್ರಾಮೀಣ ಜನರಿಗೆ ಅವರದೇ ಗ್ರಾಮದಲ್ಲಿ ಉತ್ತಮ ಕಾರ್ಯಗಳನ್ನ ನೀಡಿ ವರ್ಷದ 100 ದಿನಗಳ ಕೆಲಸವನ್ನ ನರೇಗಾ ( NREGA ) ಯೋಜನೆಯಲ್ಲಿ ನೀಡಲಾಗುತ್ತದೆ. ಕೆರೆ ಒಡ್ಡು ನಿರ್ಮಾಣ, ಸಸಿಗಳನ್ನ ನೆಡುವುದು, ಕೆರೆ ಹೂಳು ತೆಗೆಯುವುದು, ಕೃಷಿ ಹೊಂಡ ಸೇರಿದಂತೆ ಹಲವಾರು ಕಾಮಗಾರಿಗಳನ್ನ ಸ್ಥಳೀಯ ಜನರಿದಂಲೇ ಕೆಲಸ ಮಾಡಿಸಿಕೊಂಡು ಅವರಿಗೆ ಜಾಬ್ ಕಾರ್ಡ್ ಮೂಲಕ ಕೂಲಿ ನೀಡಲಾಗುತ್ತದೆ.
ಕಲಬುರಗಿ ಪಾಲಿಕೆ ಗದ್ದುಗೆ ಕಮಲ ಪಾಳಯ ಸರ್ಕಸ್, ಮೇಯರ್- ಉಪಮೇಯರ್ ಚುನಾವಣೆ ಮುಂದೂಡಿಕೆ!
ಧಾರವಾಡ (Dharwad) ಜಿಲ್ಲೆಯಾದ್ಯಂತ 144ಕ್ಕೂ ಹೆಚ್ಚು ಗ್ರಾಮ ಪಂಚಾಯಿತಿಗೆ ನರೇಗಾ ಯೋಜನೆಯಲ್ಲಿ ಕಳೆದ ಎರಡು ತಿಂಗಳಿನಿಂದ ಕೂಲಿ ಹಣ ಬಿಡುಗಡೆಯೇ ಆಗಿಲ್ಲ! ಹೌದು ಸುಮಾರು 3 ಕೋಟಿಗೂ ಅಧಿಕ ಹಣ ಈಗಾಗಲೇ ಹಳ್ಳಿ ಜನರ ಖಾತೆಗೆ ಜಮಾ ಆಗಬೇಕಿತ್ತು. ಆದ್ರೆ ಕಳೆದ 2 ತಿಂಗಳಿನಿಂದ ದುಡಿದ ಕೂಲಿ ಹಣ ಸಿಗದೆ ಹಳ್ಳಿ ಜನರು ಮತ್ತೆ ಸಿಟಿಗಳತ್ತ ಕೂಲಿಗಾಗಿ ಬರುವ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮೀಣ ಜನರು ಬೆಳಿಗ್ಗೆಯಿಂದ ಸಂಜೆವರೆಗೂ ದುಡಿದರೂ ಕೂಲಿ ಮಾತ್ರ ನೀಡದೆ ಇರೋದು ಇನ್ನಾದ್ರೂ ಅಧಿಕಾರಿಗಳು ಎಚ್ಚೆತ್ತು ಹಣ ಬಿಡುಗಡೆ ಮಾಡಬೇಕಿದೆ..