ಮುಸ್ಲಿಂ ಸಮುದಾಯದ ಅನಾಥಾಶ್ರಮ ಮೇಲೆ ಮಕ್ಕಳ ಆಯೋಗ ದಾಳಿ: ಕರ್ನಾಟಕದಲ್ಲಿ ತಾಲಿಬಾನ್ ಮಾದರಿ ಶಿಕ್ಷಣ..?

Nov 21, 2023, 12:31 PM IST

ಕರ್ನಾಟಕದಲ್ಲಿ ತಾಲಿಬಾನ್ ಮಾದರಿಯಲ್ಲಿ ಮುಸ್ಲಿಂ ‌ಮಕ್ಕಳಿಗೆ ಶಿಕ್ಷಣ ಕೊಡ್ತಿದ್ದಾರಾ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ. ಮೂಲ ಸೌಕರ್ಯ ಇಲ್ಲದ ಕೊಠಡಿಯಲ್ಲಿ ಮಕ್ಕಳು ವಾಸ್ತವ್ಯ ಮಾಡುತ್ತಿದ್ದು, ಸುಮಾರು 200 ಮಕ್ಕಳಿಗೆ ಅನಾಥಾಶ್ರಮವೊಂದು(Orphanage) ಆಶ್ರಯ ನೀಡಿದೆ. ಇಂದು ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಅತೀ ದೊಡ್ಡ ಸುದ್ದಿಯನ್ನು ಬ್ರೇಕ್‌ ಮಾಡಿದೆ. ಸೈಯದ್ ನಗರದ‌ಲ್ಲಿರುವ ದಾರೂಲ್ ಉಲೂಮ್ ಸಾಧಿಯಾ ಅನಾಥಾಶ್ರಮದಲ್ಲಿ ಸುಮಾರು ಇನ್ನೂರು ಮಕ್ಕಳು(Children) ಇದ್ದಾರೆ. ಇಲ್ಲಿ ಹೊರಗಡೆ ಮಕ್ಕಳನ್ನು ಕಳುಹಿಸುವುದಿಲ್ಲ. ನಾಲ್ಕು ಜನ ಇರಬೇಕಿದ್ದ ಕೊಠಡಿಯಲ್ಲಿ 8 ಮಕ್ಕಳು ಇದ್ದು, ಕೊಠಡಿಯಲ್ಲಿ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲವೇ ಇಲ್ಲ. ಬೆಳಿಗ್ಗೆಯಿಂದ ರಾತ್ರಿಯವೆರಗೆ  ಇಲ್ಲಿ ಬರೀ ಟ್ರೈನಿಂಗ್ ಕೊಡಲಾಗುತ್ತೆ. ಈ ಬಗ್ಗೆ ರಾಷ್ಟ್ರೀಯ ಮಕ್ಕಳ ಆಯೋಗದ(National Children Commission) ಅಧ್ಯಕ್ಷರಿಂದ ಗಂಭೀರ ಆರೋಪ ಮಾಡಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಕ್ಕಳ ಆಯೋಗ ನೋಟಿಸ್ ನೀಡಿದೆ. ಈ ಬಗ್ಗೆ ವರದಿ ನೀಡುವಂತೆ ಆಯೋಗ ಸೂಚನೆ ನೀಡಿದೆ. ರಾಷ್ಟ್ರೀಯ ಆಯೋಗ ಟ್ವಿಟ್ ಮಾಡಿರುವ ರೀತಿ ಇಲ್ಲಿ ನಡೆಸಿಕೊಳ್ಳುತ್ತಿಲ್ಲ. ತಾಲಿಬಾನ್ ‌ಮಾದರಿಯಲ್ಲಿ ಶಿಕ್ಷಣ ನೀಡುತ್ತಿಲ್ಲ. ಯಾರೇ ಬೇಕಾದ್ರು ಬಂದು ಪರಿಶೀಲನೆ ನಡೆಸಬಹುದು ಎಂದು ದಾರೂಲ್ ಉಲೂಮ್ ಸಾಧಿಯಾ ಟ್ರಸ್ಟ್ ಸದಸ್ಯ ಮೌಯ್ಸಿನ್ ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ:  'ಕೈವ'ಸಿನಿಮಾದ ಸಾಂಗ್ ರಿಲೀಸ್..! ಮುಸ್ಲಿಂ ಹುಡುಗಿ ರೋಲ್‌ನಲ್ಲಿ ಮೇಘಾ !