Apr 12, 2022, 1:09 PM IST
ಬೆಂಗಳೂರು (ಏ. 12): ರಾಜ್ಯದಲ್ಲಿ ಭುಗಿಲೆದ್ದಿರುವ ಹಿಂದೂ ಮುಸ್ಲಿಂ ಧರ್ಮ ದಂಗಲ್‌ಗೆ ಬ್ರೇಕ್ ಹಾಕಲು ಮುಜುರಾಯಿ ಇಲಾಖೆ ಸಿದ್ಧವಾಗಿದೆ. ಕಠಿಣ ಕಾನೂನು ಜಾರಿಗೆ ಇಲಾಖೆ ಮುಂದಾಗಿದ್ದು, ಕಾನೂನಿನಲ್ಲಿರುವ ಅಂಶ ಇಟ್ಟುಕೊಂಡೆ ಈ ಬಾರಿ ಹರಾಜು ನಡೆಯಲಿದೆ. ಹೀಗಾಗಿ ಮುಜರಾಯಿ ದೇಗುಲದ ಅಂಗಡಿಗಳಲ್ಲಿ ಮುಸ್ಲಿಮರಿಗೆ ಅವಕಾಶವಿಲ್ಲ, ವ್ಯಾಪಾರ ಮಳಿಗೆಗಳ ಹರಾಜಿನಲ್ಲೂ ಮುಸ್ಲಿಮರಿಗೆ ಅವಕಾಶ ನೀಡಲಾಗುತ್ತಿಲ್ಲ. ಈ ಬೆನ್ನಲ್ಲೆ ಬೆಂಗಳೂರಿನ 48 ಅಂಗಡಿಗಳಿಗೆ ನೋಟಿಸ್ ನೀಡಲಾಗಿದ್ದು 45 ಅಂಗಡಿಗಳು ಹರಾಜಿಗಾಗಿ ರೆಡಿಯಾಗಿವೆ
ಇದನ್ನೂ ಓದಿ: ಬೇಲೂರು ದೇವಸ್ಥಾನದಲ್ಲಿ ಮುಸ್ಲಿಂ ವ್ಯಾಪಾರಕ್ಕೆ ವಿರೋಧ: ನಮ್ಮ ಜಿಲ್ಲೆಯಲ್ಲಿ ಆ ರೀತಿ ಆಗೋದಕ್ಕೆ ಬಿಡಲ್ಲ: ಎಚ್ಡಿಕೆ
ಮಳಿಗೆಗಳ ಹರಾಜಿನಲ್ಲಿ ಈ ಮೊದಲು ಮುಸ್ಲಿಮರು ಭಾಗವಹಿಸುತ್ತಿದ್ದರು. ಸಬ್ ಲೀಸ್ ಮೂಲಕ ಮುಸ್ಲೀಮರು ವ್ಯಾಪಾರ ನಡೆಸುತ್ತಿದ್ದರು. ಆದರೆ ಈಗ ಮುಂಬರುವ ಹರಾಜಿನಲ್ಲಿ ಮುಸ್ಲಿಮರಿಗೆ ಅವಕಾಶವಿಲ್ಲ. ಹರಾಜ ಪಡೆಯುವವರೇ ವ್ಯಾಪಾರ ಮಾಡಬೇಕು ಹಾಗೂ ಹಿಂದೂಗಳು ಮುಸ್ಲಿಮರಿಗೆ ಸಬ್ ಲೀಸನ್ನು ನೀಡುವಂತಿಲ್ಲ. ಒಂದು ವೇಳೆ ಸಬ್‌ಲೀಸ್ ನೀಡಿದರೆ ದೇಗುಲದ EO ಸಸ್ಪೆಂಡ್ ಮಾಡಲಾಗುವುದು.