ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶನ ದರ್ಶನ ಪಡೆದ ಮುಸ್ಲಿಂ ಕುಟುಂಬ

Sep 1, 2022, 6:45 PM IST

ಹುಬ್ಬಳ್ಳಿ, (ಸೆಪ್ಟೆಂಬರ್.01): ಪ್ರಸ್ತುತ ಕರ್ನಾಟಕದಲ್ಲಿ ಹಿಂದೂ ಮುಸ್ಲಿಮರ ಮಧ್ಯೆ ಧರ್ಮ ದಂಗಲ್ ಹಾಗೂ ಧಾರ್ಮಿಕ ಆಚರಣೆ ವಿಚಾರವಾಗಿ ಒಂದಲ್ಲ ಒಂದು ವಿವಾದಗಳು ಆಗುತ್ತಲೇ ಇವೆ. ಇವೆಲ್ಲಾ ಈ ಬಾರಿ ಗಣೇಶೋತ್ಸವವನ್ನೂ ಸಹ ಬಿಟ್ಟಿಲ್ಲ.

ಹೌದು...ಹುಬ್ಬಳ್ಳಿಯ ವಿವಾದಿತ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಹಿಂದೂ-ಮುಸ್ಲಿಂ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಈ ಬಾರಿ ಈದ್ಗಾದಲ್ಲಿ ಗಣೇಶನನ್ನು ಕೂಡಿಸುತ್ತೇವೆ ಎಂದು ಹಿಂದೂಪರ ಸಂಘಟನೆಗಳು ಪಣ ತೊಟ್ಟು ಹಠ ಸಾಧಿಸಿವೆ. ಮತ್ತೊಂದೆಡೆ ಮುಸ್ಲಿಂ ಸಂಘಟನೆಗಳು ಈದ್ಗಾದಲ್ಲಿ ಗಣೇಶೋತ್ಸವ ಬೇಡವೆಂದು ಹೋರಾಟ ಮಾಡಿವೆ. 

Ganesh Chaturthi: ಮಾದರಿಯಾಯ್ತು ಬಾಗಲಕೋಟೆಯ ಹಿಂದೂ-ಮುಸ್ಲಿಂ ಭಾವೈಕ್ಯತೆ ಗಣೇಶ

ಇದರ ಮಧ್ಯೆ ಮುಸ್ಲಿಂ ಕುಟುಂಬವೊಂದು  ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಿದ  ಗಣೇಶನ ದರ್ಶನ ಪಡೆದು ಅಚ್ಚರಿ ಮೂಡಿಸಿದೆ.ಮಗುವಿನ ಜೊತೆ ಆಗಮಿಸಿದ ದಂಪತಿ ಈದ್ಗಾ ಗಣೇಶ ದರ್ಶನ ಪಡೆದರು. ಹಾಗೇ ಪೆಂಡಾಲ್ ಎದುರು ವಿತರಿಸುತ್ತಿರುವ ಪ್ರಸಾದ ಸ್ವೀಕರಿಸಿ ತೆರಳಿರುವುದು ವಿಶೇಷವಾಗಿತ್ತು.