ಹಸುಗಳೊಂದಿಗೆ ಮಠ ಖಾಲಿ ಮಾಡಿದ ಮುರುಘಾ ಶರಣರ ಆಪ್ತೆ: ಇದರ ಹಿಂದಿನ 'ನಿಗೂಢ' ಏನು?

Jan 29, 2023, 4:35 PM IST

ಮುರುಘಾ ಶರಣರ ಆಪ್ತೆ ರೇವತಿ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಜಿ.ಹೊಸಹಳ್ಳಿ ಗ್ರಾಮದ ಪಡುವಲ‌ ಮಠದಲ್ಲಿದ್ದಳು. ಅಕ್ಕ ಮತ್ತು ತನ್ನ ತಾಯಿಯೊಂದಿಗೆ ನೆಲೆಸಿದ್ದ ಆಕೆ, ಇದೀಗ ಆಕೆ ದಿಢೀರನೇ ಜಾಗ ಖಾಲಿ ಮಾಡಿದ್ದಾಳೆ. ಮಠದ ಜಾಗವನ್ನು ಅಭಿವೃದ್ಧಿ ಮಾಡುತ್ತೇನೆ ಎಂದು ಹೇಳಿ ಸುಮಾರು 10-12 ವರ್ಷಗಳಿಂದ ರೇವತಿ ಅಲ್ಲಿಯೇ ವಾಸವಾಗಿದ್ದಳು. ರೇವತಿ ನಾಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಜಿ. ಹೊಸಳ್ಳಿಯಲ್ಲಿ ಶ್ರೀ ಜಡೆರುದ್ರ ಸ್ವಾಮಿ ಗದ್ದುಗೆ ಮಠವಿದ್ದು, ಮಠಕ್ಕೆ‌ ಸೇರಿದ 18 ಎಕರೆ ಜಾಗವಿತ್ತು.‌ ಈ ಜಾಗವನ್ನು ಗ್ರಾಮಸ್ಥರು ಮರುಘಾ ಮಠಕ್ಕೆ ಹಸ್ತಾಂತರ ಮಾಡಿದ್ದರು, ಮರುಘಾ ಮಠಕ್ಕೆ ಹಸ್ತಾಂತರವಾದ ಬಳಿಕ ಮಠದ ಪರವಾಗಿ ಇಲ್ಲಿ ರೇವತಿ ವಾಸವಾಗಿದ್ದಳು. 

ಉತ್ತರ ಪ್ರದೇಶದಂತೆ ರಾಜ್ಯದಲ್ಲಿ ಬದಲಾವಣೆ ಸಾಧ್ಯತೆ: ಶಾಸಕ ಸಿ.ಟಿ ರವಿ