ಬೆಳಗಾವಿ: ಕೋತಿ ಅಟ್ಟಹಾಸಕ್ಕೆ ನಲುಗಿದ ಗ್ರಾಮಸ್ಥರು, ಒಂದೇ ವಾರದಲ್ಲಿ ಮೂವರ ಮೇಲೆ ದಾಳಿ!

Dec 8, 2024, 9:53 AM IST

ಬೆಳಗಾವಿ(ಡಿ.08): ಬೆಳಗಾವಿ ಜಿಲ್ಲೆಯ ನಿಲಜಿ ಗ್ರಾಮದಲ್ಲಿ ಕೋತಿ ಅಟ್ಟಹಾಸ ಮೆರೆಯುತ್ತಿದೆ. ಕೋತಿಯ ಅಟ್ಟಹಾಸಕ್ಕೆ ಗ್ರಾಮಸ್ಥರು ನಲುಗಿ ಹೋಗಿದ್ದಾರೆ. ಒಂದೇ ವಾರದಲ್ಲಿ ಮೂವರ ಮೇಲೆ ಕೋತಿ ದಾಳಿ ಮಾಡಿದೆ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಜನರ ಮೇಲೆ ಕೋತಿ ದಾಳಿ ಮಾಡುತ್ತಿದೆ. ಇದರಿಂದ ಜನರು ಮನೆ ಬಿಟ್ಟು ಹೊರಗಡೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಅಂತ ಗ್ರಾಮಸ್ಥರು ಆಕ್ರೋಶವನ್ನ ವ್ಯಕ್ತಪಡಿಸುತ್ತಿದ್ದಾರೆ. ಕೋತಿಯ ಅಟ್ಟಹಾಸಕ್ಕೆ ಗ್ರಾಮಸ್ಥರು ಕೈಯಲ್ಲಿ ದೊಣ್ಣೆ ಹಿಡಿದುಕೊಂಡು ಓಡಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. 

ಕಲಬುರಗಿ ಜೈಲಿನಲ್ಲಿ ಖೈದಿಗಳ ಬಿಂದಾಸ್ ಲೈಫ್: ಇದು ಅಧೀಕ್ಷಕಿ ವಿರುದ್ಧದ ಷಡ್ಯಂತ್ರವೇ?