ಮೌಲ್ವಿಗಳ ಸರ್ವೆ ಯಾಕೆ? ಶಾಸಕ ಅರವಿಂದ್ ಬೆಲ್ಲದ್ ಕೊಟ್ಟ ಕಾರಣ ಇದು

Apr 20, 2022, 2:53 PM IST

ಬೆಂಗಳೂರು (ಏ. 20):  ಹುಬ್ಬಳ್ಳಿ ಹಿಂಸಾಚಾರ ಪ್ರಕರಣ ಬೆನ್ನಲ್ಲೇ ರಾಜ್ಯದಲ್ಲಿರುವ ಎಲ್ಲ ಮೌಲ್ವಿಗಳ ಸರ್ವೇಯಾಗಬೇಕು ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಆಗ್ರಹಿಸಿದ್ದಾರೆ. ಈ ಬಗ್ಗೆ ಗೃಹ ಸಚಿವರ ಜತೆ ಮಾತನಾಡಿದ್ದೇನೆ ಎಂದು ಬೆಲ್ಲದ್ ಹೇಳಿದ್ದಾರೆ. "ರಾಜ್ಯದ ಮುಸ್ಲಿಮರು ಹಿಂದುಗಳ ಜತೆ ಸಾಮರಸ್ಯದಿಂದ ಇದ್ದರು. ಆದರೆ ಕಳೆದ 10 ವರ್ಷದಿಂದ ಹಿಂದೂ ಮುಸ್ಲಿಂ ಸಾಮರಸ್ಯ ಹಾಳಾಗುತ್ತಿದೆ. ಮುಸ್ಲಿಮರು ಪ್ರತ್ಯೇಕತೆಯ ಮನೋಭಾವ ಬೆಳೆಸಿಕೊಳ್ಳುತ್ತಿದ್ದಾರೆ. ಉತ್ತರಪ್ರದೇಶ, ಬಿಹಾರ್‌ ಕಡೆಯಿಂದ ಮೌಲ್ವಿಗಳು ಬರ್ತಾರೆ. ಇಂಥ ಮೌಲ್ವಿಗಳನ್ನು ಅವರ ರಾಜ್ಯಕ್ಕೆ ವಾಪಸ್‌ ಕಳಹಿಸಬೇಕು" ಎಂದು ಬೆಲ್ಲದ್‌ ಹೇಳಿದ್ದಾರೆ. 

ಇದನ್ನೂ ಓದಿ: ಹುಬ್ಬಳ್ಳಿ ಗಲಭೆ: ಭಾಷಣ ಮಾಡಿದ ವ್ಯಕ್ತಿ ಮೌಲ್ವಿಯಲ್ಲ, ವೇಷಧಾರಿ: ಮುಸ್ಲಿಂ ಮುಖಂಡ

ಇನ್ನು ರಾಜ್ಯದಲ್ಲಿ ಮಸೀದಿ ಹಾಗೂ ಮೌಲ್ವಿಗಳ ಸರ್ವೇಯಾಗಬೇಕು ಎಂದು ಬಿಜೆಪಿ ಶಾಸಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಮಸೀದಿಗಳಿಂದಲೇ ಈ ರೀತಿ ಪ್ರಚೋದನೆಯಾಗುತ್ತಿದೆ ಎಂದು ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಘಟನೆಯ ದೃಶ್ಯಾವಳಿಗಳನ್ನು ಗಮನಿಸಿದಾಗ ಹಿಂಸಾಚಾರಕ್ಕ ಮೌಲ್ವಿಯೇ ಪ್ರಚೋದನೆ ನೀಡಿರುವುದು ಕಂಡು ಬರುತ್ತಿದೆ. ಹೀಗಾಗಿ ಮೌಲ್ವಿಯ ಹಿನ್ನೆಲೆಯನ್ನು ತನಿಖೆ ಮಾಡಬೇಕಾಗಿ ಬಿಜೆಪಿ ಶಾಸಕರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.