Jul 16, 2024, 11:49 AM IST
ಶಾಸಕ ಬಸನಗೌಡ ದದ್ದಲ್ ಮನೆ ಮೇಲೆ ಇಡಿ ದಾಳಿ(ED raid) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ದಾಖಲೆಗಳು(Property documents) ಪತ್ತೆಯಾಗಿವೆ. ದದ್ದಲ್ ಪತ್ನಿ, ಮಗ ಮತ್ತು ಮಗಳ ಹೆಸರಿನ ಜಮೀನಿನ ದಾಖಲೆಗಳು ಪತ್ತೆಯಾಗಿವೆ. ವಾಲ್ಮೀಕಿ ಹಗರಣ ಹೊರಬರುತ್ತಿದ್ದಂತೆ ಜಮೀನಿನ ದಾಖಲೆಗಳು ಬದಲಾಗಿವೆ. ಮಗಳ ಹೆಸರಿನಲ್ಲಿ ಖರೀದಿ ಮಾಡಿದ ಭೂಮಿಯನ್ನು ಬೇರೆಯವರ ಹೆಸರಿಗೆ ಬದಲು ಮಾಡಲಾಗಿದೆ. 9.84 ಎಕರೆ ಭೂಮಿ 5 ತಿಂಗಳಲ್ಲಿ ಬೇರೆಯವರ ಹೆಸರಿಗೆ ಬದಲಾವಣೆ ಮಾಡಲಾಗಿದೆ. ಜನವರಿ 30ರಂದು ದದ್ದಲ್(MLA Basanagouda Daddal) ಕೊನೆಯ ಮಗಳು ಅನ್ನಪೂರ್ಣಗೆ ಭೂಮಿ(Land) ಮ್ಯುಟೇಶನ್ ಮಾಡಲಾಗಿದೆ. ಮೇ.26 ರಂದು ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಧಿಕಾರಿ ಆತ್ಮಹತ್ಯೆ ಆಗುತ್ತಿದ್ದಂತೆ ಶಾಸಕ ಬಸನಗೌಡ ದದ್ದಲ್ ಅಲರ್ಟ್ ಆಗಿದ್ದು, ತನ್ನ ಮಗಳ ಹೆಸರಿನಲ್ಲಿ ಇದ್ದ ಭೂಮಿ ಬೇರೆಯವರ ಹೆಸರಿನಲ್ಲಿ ನೋಂದಣಿ ಮಾಡಿಸಿದ್ದಾರೆ. ಜೂನ್ 25ರಂದು ಮಗಳ ಹೆಸರಿನಲ್ಲಿದ್ದ ಭೂಮಿ ಕೃಷ್ಣನಾಯಕ್‌ಗೆ ಮ್ಯುಟೇಶನ್ ಮಾಡಲಾಗಿದೆ. 5 ಎಕರೆ ಮತ್ತು 3.34 ಗುಂಟೆ ಜಮೀನು ಜೂನ್ 14ರಂದು ಮುಟೇಶನ್ ಮಾಡಲಾಗಿದೆ. ದದ್ದಲ್ ಮಗಳ ಹೆಸರಿನ ಭೂ ದಾಖಲೆ ಬದಲಾವಣೆ ಕುರಿತು ಇ.ಡಿ ಸಮಗ್ರ ತನಿಖೆ ನಡೆಸುತ್ತಿದ್ದು, ದದ್ದಲ್ ಮಗಳ ಹೆಸರಿನ ಭೂಮಿ ಬೇರೆಯವರಿಗೆ ವರ್ಗಾವಣೆ ಮಾಡಿದ್ದು ಏಕೆ? ಮಗಳಿಗಾಗಿ ಖರೀದಿ ಮಾಡಿದ ಭೂಮಿ ದದ್ದಲ್ ಮಾರಾಟ ಮಾಡಿದ್ದು ಏಕೆ? ಎಂಬ ಪ್ರಶ್ನೆಗಳು ಇದೀಗ ಕಾಡತೊಡಗಿವೆ.
ಇದನ್ನೂ ವೀಕ್ಷಿಸಿ: ದರ್ಶನ್ ಗ್ಯಾಂಗ್‌ಗೆ ಪೊಲೀಸರಿಂದ ಮತ್ತೊಂದು ಮಾಸ್ಟರ್ ಸ್ಟ್ರೋಕ್: ಫಾಸ್ಟ್ ಟ್ರ್ಯಾಕ್ ಕೋರ್ಟ್‌ಗೆ ಕೊಡಲು ಸಿದ್ಧತೆ !