ಕಲಬುರಗಿಯ ಶ್ರೀ ಶಿವಾನಂದ ಸ್ವಾಮೀಜಿ ಮತ್ತು ಚಿಕ್ಕಮಗಳೂರಿನ ಮಹಮದ್ ನಾಸೀರ್ ಸಮಾಜ ಸೇವೆಯಲ್ಲಿ ತೊಡಗಿದ್ದು, ಇತರರಿಗೆ ಮಾದರಿಯಾಗಿದ್ದಾರೆ.
ಕಲಬುರಗಿಯ ಜೇವರ್ಗಿಯ ಸೊನ್ನ ವಿರಕ್ತ ಮಠದ ಪೀಠಾಧಿಪತಿ ಮಕ್ಕಳಿಗಾಗಿ ಜೋಳಿಗೆ ಹಾಕಿದ್ದು, ಮನೆ ಮನೆಗೂ ಹೋಗುತ್ತಾರೆ. ಅದು ತಮ್ಮ ಮಠಕ್ಕಾಗಿ ಅಲ್ಲ, ಬಡ ಮಕ್ಕಳಿಗಾಗಿ. ಈ ಮೂಲಕ ಸರ್ಕಾರ ಮಾಡುವ ಕೆಲಸವನ್ನು ಸ್ವಾಮೀಜಿ ಮಾಡಿದ್ದಾರೆ.ತಮ್ಮ ಮಠದಿಂದ ಶಾಲೆಗೆ 1 ಲಕ್ಷ ರೂ. ದೇಣಿಗೆ ನೀಡಿ, 5 ಎಕರೆ ಜಮೀನಿನಲ್ಲಿ ಶಾಲೆಗೆ 2 ಎಕರೆ ದಾನ ಮಾಡಿದ್ದಾರೆ. ಇನ್ನು ಚಿಕ್ಕಮಗಳೂರು ನಗರ ನಿವಾಸಿ ಮಹ್ಮದ್ ನಾಸೀರ್ ಗೋವುಗಳ ರಕ್ಷಣೆಗೆ ಪಣ ತೊಟ್ಟಿದ್ದಾರೆ. ಪಂಚಮುಖಿ ಆಂಜನೇಯ ದೇಗುಲಕ್ಕೆ 4 ಎಕರೆ ದಾನ ಮಾಡಿದ್ದಾರೆ. ಕಡೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ರಸ್ತೆ ಪಕ್ಕದ ಬೆಲೆ ಬಾಳುವ ಜಾಗವನ್ನು ದಾನ ಮಾಡಿದ್ದಾರೆ. 5 ಕೋಟಿಗೂ ಅಧಿಕ ಬೆಲೆಯ ಭೂಮಿಯನ್ನು ಚಿಕ್ಕಮಗಳೂರಿನ ಸ್ವಾಮಿ ಸಮರ್ಥ ರಾಮದಾಸ ಟ್ರಸ್ಟ್ಗೆ ದಾನ ಮಾಡಿದ್ದಾರೆ.