Jan 7, 2023, 12:05 PM IST
ಪ್ಲಾಸ್ಟಿಕ್ ಬಾಕ್ಸ್'ಗಳಲ್ಲಿ ಬಾಂಬ್ ಸ್ಫೋಟಿಸಿ ಮಂಗಳೂರು ಬಾಂಬರ್ ಶಾರೀಕ್, ಟ್ರಯಲ್ ಬ್ಲಾಸ್ಟ್ ನಡೆಸಿದ್ದ ಎಂಬ ರೋಚಕ ಮಾಹಿತಿ ಹೊರ ಬಿದ್ದಿದೆ. ಎನ್.ಐ.ಎ ವಿಚಾರಣೆ ವೇಳೆ ಬಾಂಬ್ ತಯಾರಿಕೆಯ ಸೀಕ್ರೇಟ್ಸ್ ಬಿಚ್ಚಿಟ್ಟಿದ್ದಾನೆ ಶಾರೀಕ್. ತರಬೇತಿಯೇ ಇಲ್ಲದೇ ಬಾಂಬ್ ತಯಾರಿಸಿರೋದಾಗಿ ಶಾರೀಕ್ ಹೇಳಿಕೆ ನೀಡಿದ್ದು,ಗೂಗಲ್, ಪಿಡಿಎಫ್ ಫೈಲ್ ಮತ್ತು ಯೂಟ್ಯೂಬ್'ನಲ್ಲಿ ಹುಡುಕಾಡಿ ಬಾಂಬ್ ತಯಾರಿ ಮಾಡುತ್ತಿದ್ದ. ಹಲವು ಬಾರಿ ಪ್ಲಾಸ್ಟಿಕ್ ಡಬ್ಬಗಳಲ್ಲಿ ಬಾಂಬ್ ತಯಾರಿಸಿ ಬ್ಲಾಸ್ಟಿಂಗ್ ಮಾಡಿದ್ದು, ಸಣ್ಣ ಮಟ್ಟದಲ್ಲಿ ಪಟಾಕಿ ಸದ್ದಿನಷ್ಟು ಮಾದರಿಯಲ್ಲಿ ಬಾಂಬ್ ತಯಾರಿಸಿರುವುದಾಗಿ ತಿಳಿದು ಬಂದಿದೆ. ಮೊದಲ ಬಾರಿಗೆ ಕುಕ್ಕರ್'ನಲ್ಲಿ ಬಾಂಬ್ ತಯಾರಿಸಿ ತಂದಿದ್ದ ಶಾರೀಕ್, ಬಾಂಬ್ ತಯಾರಿಯಲ್ಲಿ ನೈಪುಣ್ಯತೆ ಇಲ್ಲದಿರೋದು ಎನ್.ಐ.ಎ ತನಿಖೆಯಲ್ಲಿ ಬಯಲಾಗಿದೆ.
Udupi: ದೈವಕೋಲದ ವಿಚಾರದಲ್ಲಿ 'ಕೋರ್ಟ್‌ನಲ್ಲಿ ನೋಡಿಕೊಳ್ತೀನಿ' ಎಂದ ವ್ ...