Mandya: ಪೊಲೀಸ್‌ ಠಾಣೆಯಲ್ಲೇ ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಕೆನ್ನೆಗೆ ಬಾರಿಸಿದ ಆರೋಪಿ!

Dec 28, 2024, 10:26 PM IST

ಮಂಡ್ಯ (ಡಿ.28): ಪೊಲೀಸ್‌ ಠಾಣೆಯಲ್ಲೇ ಪೊಲೀಸ್‌ ಮೇಲೆ ಹಲ್ಲೆಯಾಗಿದೆ. ವಿಚಾರಣೆಗೆ ಬಂದವನೇ ಪೊಲೀಸರ ಮೇಲೆ ಗೂಂಡಾಗಿರಿ ತೋರಿದ್ದಾರೆ.  ಮಂಡ್ಯ ಜಿಲ್ಲೆಯ ಪಾಂಡವಪುರ ಟೌನ್ ಠಾಣೆಯಲ್ಲಿ ಘಟನೆ ನಡೆದಿದೆ.

ಸಾಗರ್ ಪೊಲೀಸ್ ಸಿಬ್ಬಂದಿಗಳ ಮೇಲೆ ಅವಾಜ್ ಹಾಕಿ ಹಲ್ಲೆ ನಡೆಸಿದ ಭೂಪ. ಜಮೀನು ವಿವಾದದ ಸಂಬಂಧ ಸಾಗರ್ ವಿರುದ್ದ ದೂರು ದಾಖಲಾಗಿತ್ತು. ದೂರಿನ ಹಿನ್ನಲೆಯಲ್ಲಿ ಪೊಲೀಸರು ಸಾಗರ್‌ನನ್ನು ಠಾಣೆಗೆ ಕರೆಸಿದ್ದರು. ಈ ವೇಳೆ ಸಾಗರ್ ಪೊಲೀಸರಿಗೆ ಅವಾಜ್ ಹಾಕಿದ್ದಾನೆ.

ನಿವೇದಿತಾ ಗೌಡ VS ಜ್ಯೋತಿ ರೈ: ಹಾಟ್‌ನೆಸ್‌ನಲ್ಲಿ ಯಾರು ಬೆಸ್ಟ್‌!

ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಪೊಲೀಸ್‌ ಕಾನ್ಸ್‌ಸ್ಟೇಬಲ್‌ ಅಭಿಷೇಕ್‌ ಕೈ ಮಾಡಿದ್ದಾನೆ. ಪೇದೆ ಕೈ ಮಾಡ್ತಿದ್ದಂತೆ ಸಾಗರ್ ನಿಂದ ಪ್ರತಿದಾಳಿಯಾಗಿದೆ. ಹಲ್ಲೆ ನಡೆಸಿದ್ದಲ್ಲದೇ ಕುತ್ತಿಗೆ ಪಟ್ಟಿ ಹಿಡಿದು ಗೂಂಡಾಗಿರಿ ಮಾಡಿದ್ದಾರೆ. ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾಗ್ತಿದ್ದ ಸಾಗರ್‌ನನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿದ್ದಾರೆ.