Chikkamagalur : ಪತ್ನಿಯನ್ನ ಹುಡುಕಿಕೊಡಿ, ನೊಂದ ಪತಿಯ ಅಳಲು ಕೇಳೋರ್ಯಾರು.!?

Chikkamagalur : ಪತ್ನಿಯನ್ನ ಹುಡುಕಿಕೊಡಿ, ನೊಂದ ಪತಿಯ ಅಳಲು ಕೇಳೋರ್ಯಾರು.!?

Published : Dec 10, 2021, 01:59 PM IST

- ಅಣ್ಣನ ಒತ್ತಾಯಕ್ಕೆ ಮಣಿದು ಆಕೆಯನ್ನ ವರಿಸಿದ! 

- ಮದ್ವೆ ಆದ್ಮೇಲೆ ಗೊತ್ತಾಗಿದ್ದು ತಾನು ಆಕೆಗೆ ನಾಲ್ಕನೇ ಗಂಡ ಅಂತ! 

- ಚಿನ್ನ ಸೇರಿದಂತೆ ಹಣವನ್ನ ದೋಚಿಕೊಂಡು ಪತ್ನಿ ನಾಪತ್ತೆ  

- ಪತ್ನಿಯನ್ನ ಹುಡುಕಿಕೊಡಿ ಅಂತಾ ನೊಂದ ಪತಿಯ ಅಳಲು
 

ಚಿಕ್ಕಮಗಳೂರು (ಡಿ. 10): ಆತ ಜೀವನದಲ್ಲಿ ಮದುವೆಯೇ (Marriage) ಆಗಬಾರದು ಅಂದುಕೊಂಡಿದ್ದ.  ಈ ಮಧ್ಯೆ ತನ್ನ ಅಣ್ಣನ ಒತ್ತಾಯಕ್ಕೆ ಮಣಿದು ಆಕೆಯನ್ನ ವರಿಸಿಬಿಟ್ಟಿದ್ದ. ಹಾಗೇ ಮದ್ವೆ ಆದ್ಮೇಲೆ ಗೊತ್ತಾಗಿದ್ದು ತಾನು ಆಕೆಗೆ ನಾಲ್ಕನೇ ಗಂಡ ಅಂತ..! ಇದನ್ನ ಪ್ರಶ್ನೆ ಮಾಡುತ್ತಲೇ ಆಕೆ ಗಂಡನ ಮನೆಯಿಂದ ಕಾಲ್ಕಿತ್ತಿದ್ದಾಳೆ. ಹಾಗಂತ ಸುಮ್ನೆ ಎಸ್ಕೇಪ್ ಆಗಿಲ್ಲ, ಚಿನ್ನ ಸೇರಿದಂತೆ ಹಣವನ್ನ ದೋಚಿಕೊಂಡು ಹೋಗಿದ್ದಾಳೆ, ಪತ್ನಿಯನ್ನ ಹುಡುಕಿಕೊಡಿ ಅಂತಾ ಅಳಲು ತೋಡಿಕೊಂಡಿದ್ದಾನೆ

ಕಳೆದ ಎರಡು ವರ್ಷಗಳ ಹಿಂದೆ ಈ ವ್ಯಕ್ತಿ ಹಾಸನ (Hassan) ಜಿಲ್ಲೆ ಬೇಲೂರು ತಾಲೂಕಿನ ರಾಮಚಂದ್ರಪುರ ಗ್ರಾಮದ ಉಷಾ ಎಂಬಾಕೆಯನ್ನ ಮದ್ವೆಯಾಗಿದ್ರು.  ಮದುವೆಯಾದ ಮೇಲೆ ಆಕೆಯ ಒಂದೊಂದೇ ಕಥೆಗಳು ಷಡಕ್ಷರಿಗೆ ಗೊತ್ತಾಗಿದೆ.  ಆಕೆಯನ್ನ ಪ್ರಶ್ನೆ ಮಾಡಿದ್ದಕ್ಕೆ ಒಂದು ವಾರದ ಹಿಂದೆ ಷಡಕ್ಷರಿ ಮನೆಯಿಂದ ಉಷಾ ನಾಪತ್ತೆ ಆಗಿದ್ದಾಳೆ. ಅಲ್ಲದೇ ಹೀಗೆ ಮನೆಯಿಂದ ಹೋಗ್ಬೇಕಾದ್ರೆ ಚಿನ್ನ, ಹಣವನ್ನ ಎಗರಿಸಿಕೊಂಡು ಹೋಗಿದ್ದಾಳೆ!

ಪ್ರತಿದಿನ ಹುಡುಕಾಡ ನಡೆಸುತ್ತಿದ್ರೂ ಆಕೆಯ ಸುಳಿವೇ ಪತ್ತೆಯಾಗಿಲ್ಲ. ನನಗೆ ಮೋಸ ಹೋದ್ರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ, ಅದೇ ಒಬ್ಬ ಮಹಿಳೆಗೆ ಮೋಸ ಆಗಿದ್ರೆ ಎಲ್ಲರೂ ಆಕೆಯ ಬೆನ್ನಿಗೆ ನಿಲ್ಲುತ್ತಿದ್ರು. ಇದೀಗ ನನಗೆ ಸಾಥ್ ಕೊಡುವವರು ಯಾರು ಇಲ್ಲ ಅಂತಾ ಷಡಕ್ಷರಿ ನೋವು ತೋಡಿಕೊಂಡಿದ್ದಾನೆ. 

25:48ಕ್ರೈಸ್ ಸಂಸ್ಥೆ ಅಧಿಕಾರಿಗಳ ಕರ್ಮಕಾಂಡ ಬಟಾಬಯಲು; ಸುವರ್ಣನ್ಯೂಸ್​ ಕವರ್ ಸ್ಟೋರಿ ತಂಡದ ಮೆಗಾ ಬೇಟೆ
26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
Read more