Shivamogga: ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ, ಮಧ್ಯಾಹ್ನವಾದರೂ ಸೂರ್ಯರಶ್ಮಿ ಬೀಳಲ್ಲ!

Shivamogga: ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ, ಮಧ್ಯಾಹ್ನವಾದರೂ ಸೂರ್ಯರಶ್ಮಿ ಬೀಳಲ್ಲ!

Published : Dec 25, 2021, 03:45 PM ISTUpdated : Dec 25, 2021, 04:05 PM IST

ಇಬ್ಬನಿ ತಬ್ಬಿದ ಇಳೆಯಲ್ಲಿ ರವಿತೇಜ ಕಣ್ಣ ತೆರೆದು,  ಬಾನ ಕೋಟಿ ಕಿರಣ ಇಳಿದು ಬಂತು ಭೂಮಿಗೆ. ಆದರೆ ಬೆಳ್ಳಂಬೆಳಿಗ್ಗೆ ಸೂರ್ಯನ ಹೊಂಗಿರಣವೇ ಕಣ್ಮರೆಯಾಗಿ  ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ (Mist) ಹಗಲು ಹೊತ್ತಿನಲ್ಲೇ ವಾಹನ ಸವಾರರು ಹೆಡ್ ಲೈಟ್ ಹಾಕಿ ಸಂಚರಿಸ ಬೇಕಾದ ಸ್ಥಿತಿ....! 

ಶಿವಮೊಗ್ಗ (ಡಿ. 25):  ಇಬ್ಬನಿ ತಬ್ಬಿದ ಇಳೆಯಲ್ಲಿ ರವಿತೇಜ ಕಣ್ಣ ತೆರೆದು,  ಬಾನ ಕೋಟಿ ಕಿರಣ ಇಳಿದು ಬಂತು ಭೂಮಿಗೆ. ಆದರೆ ಬೆಳ್ಳಂಬೆಳಿಗ್ಗೆ ಸೂರ್ಯನ ಹೊಂಗಿರಣವೇ ಕಣ್ಮರೆಯಾಗಿ  ಮೈ ನಡುಗುವ ಚಳಿ, ಮಂಜು ಮುಸುಕಿದ ವಾತಾವರಣ (Mist) ಹಗಲು ಹೊತ್ತಿನಲ್ಲೇ ವಾಹನ ಸವಾರರು ಹೆಡ್ ಲೈಟ್ ಹಾಕಿ ಸಂಚರಿಸ ಬೇಕಾದ ಸ್ಥಿತಿ....! ಹೌದು ಕಳೆದೊಂದು ವಾರದಿಂದ ಕೊರೆಯುವ ಚಳಿಗೆ  ಮಲೆನಾಡಿನ ನಡುಮನೆ ಶಿವಮೊಗ್ಗ (Shivamogga) ಥಂಡಾ... ಥಂಡಾ... ಕೂಲ್..... ಕೂಲ್... ಆಗಿದೆ. ಕನಿಷ್ಠ 13 ಡಿಗ್ರಿಯಿಂದ 16 ಡಿಗ್ರಿಯವರೆಗೆ ಇರುವ ತಾಪಮಾನ ಜನತೆಯನ್ನು ಬೆಚ್ಚಿ ಬೀಳಿಸಿದೆ. 

ಮಲೆನಾಡಿನಲ್ಲಿ ಚಮು ಚುಮು ಚಳಿ (Winter) ಆರಂಭಗೊಂಡಿದೆ . ಡಿಸೆಂಬರ್ ಮೊದಲನೇ ವಾರದ ವರೆಗೆ ಹಿಂಗಾರು ಮಳೆ ಸುರಿದಿದ್ದು ಈಗ ಶಿವಮೊಗ್ಗದಲ್ಲಿ (Shivamogga) ಸಂಪೂರ್ಣ ಚಳಿ ಆವರಿಸಿಕೊಂಡಿದೆ . ಮಧ್ಯಾಹ್ನ 11 ಗಂಟೆಯಾದರೂ ಚಳಿಯ ಅನುಭವ ಹೋಗುತ್ತಿಲ್ಲ. ಎಳೆ ಬಿಸಿಲಿಗೆ ಮೈವೊಡ್ಡಬೇಕೆಂಬ ಅನುಭವ ಹುಟ್ಟುವುದು ಸಹಜ . ಬೆಳಿಗ್ಗಿನ ಜಾವದ ಹೊತ್ತಿಗೆ 13 ರಿಂದ 16 ಡಿಗ್ರಿ ತಲುಪಿದೆ . ಬೆಳಗ್ಗಿನ ಜಾವ ಬಿದ್ದ ಹಿಮದ ಹತ್ತಿರದಲ್ಲಿರುವ ಮನುಷ್ಯ ಕಾಣದಂತೆ ಅನುಭವ ಮೂಡಿಸಿದೆ .

ಈ ರೀತಿಯ ಚಳಿ ಮುಂದಿನ 15 ದಿನಗಳ ವರೆಗೆ ಮುಂದುವರೆಯುವ ಸಾಧ್ಯತೆ ಹೆಚ್ಚಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಈ ಚಳಿಗೆ ಬೆಚ್ಚಗಿನ ಸ್ವೆಟರ್, ಮಫ್ಲರ್, ಉಲ್ಲನ್, ಟೋಪಿ ಏನೆಲ್ಲಾ ಹಾಕಿದರೂ ಹೊರಗಡೆ ಇರುವವರಿಗೆ ಚಳಿಗೆ ಮುದುರಿಕೊಳ್ಳುವಂತಾಗಿದೆ . ಈ ಚಳಿಗೆ ಅಯ್ಯಪ್ಪ ಸ್ವಾಮಿ ಮಾಲೆ ಹಾಕುವವರು , ವಾಕಿಂಗ್ ಮಾಡುವವರ  ಪರದಾಟ ಹೇಳ ತೀರದು. ಬಿಸಿ ಬಿಸಿ ಟೀ, ಕಾಫಿ ಕುಡಿದರೂ ಮೈ ಬಿಸಿಯಾಗದೇ ನಡುಗುವಂತಾಗಿದೆ. ಒಟ್ಟಿನಲ್ಲಿ ನವೆಂಬರ್ ತಿಂಗಳು ಪೂರ್ತಿ ಬಿಟ್ಟು ಬಿಟ್ಟು ಮಳೆ ಸುರಿದು ಇದೀಗ ಡಿಸೆಂಬರ್ ನಲ್ಲಿ  ಚಳಿಯ ತೀವ್ರತೆ ಹೆಚ್ಚಾಗಿದೆ. ಜನತೆ ಮಾತ್ರ ಪ್ರಕೃತಿಯ ಈ ವೈಚಿತ್ರ್ಯಕ್ಕೆ ಹೈರಾಣಾಗಿದ್ದಾರೆ

26:56ಪ್ರೀತಿ, ದ್ರೋಹ, ದುರಂತ: ಹೆಂಡತಿಯ ಫೋಟೋ ವೈರಲ್ ಮಾಡಿ ಗಂಡ ಎಸ್ಕೇಪ್; ‘ಪಾಗಲ್ ಪ್ರೇಮಿ’ ಕಾಟಕ್ಕೆ ಗೃಹಿಣಿ ಬಲಿ!
23:12ಇಲ್ಲಿ ದೇವಿಗೆ ಬಂಗಾರವಲ್ಲ, ಬಳೆಗಳೇ ಹರಕೆ: ವಡನಬೈಲು ಪದ್ಮಾವತಿ ದೇವಿಯ ಪವಾಡದ ಕಥೆ
29:10ದೇಶದ 5 ರಾಜ್ಯಕ್ಕೆ ಬೇಕಿದ್ದ ಬಿಹಾರಿ ಬ್ರದರ್ಸ್ ಹೆಡೆಮುರಿ ಕಟ್ಟಿದ ಕರ್ನಾಟಕ ಕಾಪ್ಸ್; ಬೀದರ್‌ನಲ್ಲಿ 1 ನಿಮಿಷದಲ್ಲಿ ₹83 ಲಕ್ಷ ಎಗರಿಸಿ ಎಸ್ಕೇಪ್!
52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
Read more