ಕಳೆದ 6 ವರ್ಷದಿಂದ ಕಳಸಾ ಬಂಡೂರಿಗಾಗಿ (Kalasa Banduri) ನಡೆದ ಹೋರಾಟ, ಈ ಹೋರಾಟದಲ್ಲಿ ಅದೆಷ್ಟೋ ಹೋರಾಟಗಾರರು ಪೋಲಿಸರ ಬೂಟಿನ ಏಟು , ಲಾಠಿ ಏಟು ತಿಂದು ಹೋರಾಟ ಮಾಡಿದ್ದಾರೆ. ಇನ್ನುಕೂಡಾ ಹೋರಾಟವನ್ನ ಮುಂದುವರೆಸಿದ್ದಾರೆ.
ಧಾರವಾಡ (ಜ. 01): ಕಳೆದ 6 ವರ್ಷದಿಂದ ಕಳಸಾ ಬಂಡೂರಿಗಾಗಿ (Kalasa Banduri) ನಡೆದ ಹೋರಾಟ, ಈ ಹೋರಾಟದಲ್ಲಿ ಅದೆಷ್ಟೋ ಹೋರಾಟಗಾರರು ಪೋಲಿಸರ ಬೂಟಿನ ಏಟು , ಲಾಠಿ ಏಟು ತಿಂದು ಹೋರಾಟ ಮಾಡಿದ್ದಾರೆ ,ಇನ್ನುಕೂಡಾ ಹೋರಾಟವನ್ನ ಮುಂದುವರೆಸಿದ್ದಾರೆ. ಆದರೆ ಅಧಿಕಾರಿಗಳಿಂದಾಗಿ ನೀರು ಹಂಚಿಕೆಯ ಕಾರ್ಯ ವಿಳಂಬವಾಗುತ್ತಿದೆ. ತಮಗೆ ಬರಬೇಕಾದ ತಮ್ಮ ಪಾಲಿನ ನೀರನ್ನ ಪಡೆಯಲು ಮತ್ತೆ ಹೋರಾಟ ಮಾಡಲು ಸಜ್ಜಾಗಿದ್ದಾರೆ..
ಕಳಸಾ- ಬಂಡೂರಿ ಹೋರಾಟ ಆರಂಭವಾಗಿ ಸದ್ಯ 6 ವರ್ಷ ಕಳೆದು ಹೋಗಿದೆ. ಸರಕಾರಿ ಅಧಿಕಾರಿಗಳು ಸರಿಯಾದ ಮಾಹಿತಿಯನ್ನ ನೀಡದೆ ಇರೋದಕ್ಕೆ ನೀರು ಹಂಚಿಕೆಯ ಕಾರ್ಯ ವಿಳಂಬವಾಗುತ್ತಿದೆ. ಈ ಹಿಂದೆ ಸುಪ್ರೀಂ ಕೋರ್ಟ್ (Supreme Court) ಆದೇಶ ಮಾಡಿತ್ತು. ಗೆಜೆಟ್ ನೋಟಿಫಿಕೇಶನ್ (Notification) ಕೂಡಾ ಆಗಿದೆ. ಕೇಂದ್ರದ ಸಿಡಬ್ಲ್ಯೂಸಿ (CWc) ಅವರು ಡ‌್ಯಾಂ ಕಟ್ಟಲೂ ಪರವಾನಿಗೆಯನ್ನ 2020 ರ ನವೆಂಬರನಲ್ಲಿ ಕೊಟ್ಟಿದ್ದಾರೆ. ಆದರೆ 2021 ನವಂಬರನಲ್ಲಿ ಡ್ಯಾಂ ಕಟ್ಟುವ ಪರವಾನಿಗೆಯನ್ನ ರಿಜೆಕ್ಟ್ (Reject) ಮಾಡಿದೆ.
ಇನ್ನು ರಿಜೆಕ್ಟ್ (Reject)ಮಾಡಲೂ ಅಧಿಕಾರಿಗಳು ಕಾರಣ ಎಂದು ಮಹದಾಯಿ ಹೋರಾಟಗಾರ ವಿರೇಶ ಸೊಬರದಮಠ ನಿರಾವರಿ ಕಚೇರಿ ಮುಂದೆ ಹೋರಾಟವನ್ನ ಆರಂಭ ಮಾಡಿದ್ದಾರೆ. ಆದರೆ ನಮ್ಮ ಪಾಲಿಗೆ ಬಂದಂತಹ ಮೂರುವರೆ ಟಿಎಂಸಿ ನೀರು ಬಳಕೆ ಮಾಡಿಕ್ಕೊಳ್ಳಲೂ ಸುಪ್ರಿಂ ಕೋರ್ಟ್ ಅನುಮತಿ ಕೊಟ್ಟಿತ್ತು, ಡ್ಯಾಂ ಆದೇಶ ತರಲೂ ಹೋದಾಗ ಅಧಿಕಾರಿಗಳು ಟೆಕ್ನಿಕಲ್ ಪ್ರಾಬ್ಲಂ ಹೇಳಿ ಗೊಂದಲ ಸೃಷ್ಠಿ ಮಾಡಿದ್ದಾರೆ. ಅನುಮಾನ ಬರುವಂತೆ ಸಿಡಬ್ಲ್ಯೂಸಿಗೆ ಮಾಹಿತಿಯನ್ನ ನೀಡಿದ್ದಾರೆ. ಅದಕ್ಕೆ ಕೊಟ್ಟ ಮಾಹಿತಿ ಬಗ್ಗೆ ಅನುಮಾನ ಬಂದು ಡ್ಯಾಂ ಕಟ್ಟಲೂ ಕೊಟ್ಟ ಆದೇಶವನ್ನ ಮತ್ತೆ ರದ್ದು ಮಾಡಿದ್ದಾರೆ. ಆದ್ದರಿಂದ ತಪ್ಪು ಮಾಹಿತಿ ಕೊಟ್ಟ ಅಧಿಕಾರಿಗಳನ್ನ ವಜಾ ಮಾಡಬೇಕು ಎಂದು ಹೋರಾಟವನ್ನ ಆರಂಭಿಸಿದ್ದಾರೆ..
ಇನ್ನು ಈ ಕುರಿತು ನೀರಾವರಿ ಇಲಾಖೆಯ ಅಧಿಕಾರಿಗಳನ್ನ ಸಂಪರ್ಕ ಮಾಡಿದರೆ ಪೋನ್ ಮಾತ್ರ ತೆಗೆಯುತ್ತಿಲ್ಲ. ಈ ಕುರಿತು ಅಧಿವೇಶನ ಸಮಯದಲ್ಲಿ ವೀರೇಶ ಸೊಬರದಮಠ ಅವರನ್ನ ಕರೆದು ಚೀಫ್ ಇಂಜಿನಿಯರ್ ಶ್ರೀನಿವಾಸ ಅವರು ಮಾತನಾಡಿದ್ದಾರಂತೆ. ಆದರೆ ಏಷ್ಯಾನೆಟ್ ಸುವರ್ಣ ನ್ಯೂಸ್ ಕರೆ ಮಾಡಿ ಪ್ರಶ್ನೆ ಮಾಡಲೂ ಹೋದ್ರೆ ಸಾಹೇಬ್ರು ಪ್ರತಿದಿನಾ ಮೀಟಿಂಗ್ ಮೀಟಿಂಗ್ ಎಂದು ಸಿಗ್ತಾ ಇಲ್ಲ. ಸೋ ಅದೇನಿ ಇರಲಿ ಆದಷ್ಟು ಬೇಗ ಅಧಿಕಾರಿಗಳು ಮಾಡಿದ ತಪ್ಪನ್ನ ತಿದ್ದಿಕ್ಕೊಳ್ಳಬೇಕು, ಇಲ್ಲದಿದ್ರೆ ಅವರು ತಪ್ಪು ಮಾಹಿತಿ ಕೊಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವೀರೇಶ ಸೊಬರದಮಠ ಅವರ ಒತ್ತಾಯವಾಗಿದೆ.
ಒಟ್ಟಿನಲ್ಲಿ ದೇವರು ವರ ಕೊಟ್ರೆ ಪೂಜಾರಿ ವರ ಕೊಡ್ತಿಲ್ಲ ಅನ್ನೋ ಹಾಗೆ ಆಗಿದೆ. ಇನ್ನು ಕಳೆದ 6 ವರ್ಷಗಳಿಂದ ನಡೆಯುತ್ತಿರುವ ಕಳಸಾ ಬಂಡೂರಿ ಹೋರಾಟವನ್ನ ರೈತರು ಮಾಡ್ತಿದ್ರೆ ಇತ್ತ ಅಧಿಕಾರಿಗಳು ತಪ್ಪು ಮಾಹಿತಿಯನ್ನ ಕೊಟ್ಟು ಮಹದಾಯಿ ನೀರನ್ನ ತರುವಲ್ಲಿ ವಿಳಂಬ ಮಾಡ್ತಿರೋದು ವಿಪರ್ಯಾಸವೇ ಸರಿ