ನನ್ನ ರಾಜೀನಾಮೆ ಕೇಳಲು ನೀವು ಯಾರು ? ನಿಮಗೆ ಏನ್ ಯೋಗ್ಯತೆ ಇದೆ ?: ಮಧು ಬಂಗಾರಪ್ಪ

ನನ್ನ ರಾಜೀನಾಮೆ ಕೇಳಲು ನೀವು ಯಾರು ? ನಿಮಗೆ ಏನ್ ಯೋಗ್ಯತೆ ಇದೆ ?: ಮಧು ಬಂಗಾರಪ್ಪ

Published : Jan 02, 2024, 02:18 PM IST

ಕಟೀಲ್ ಸಾವಿನಲ್ಲೂ ರಾಜಕಾರಣ ಮಾಡಿದ್ರು. ಇನ್ನೊಬ್ಬ ವೇಸ್ಟ್ ಫೇಲೋ ರವಿಕುಮಾರ್ ಅಂತಿದ್ದಾನೆ.  ಅವನು ಜೀವನದಲ್ಲಿ ಗ್ರಾಮ ಪಂಚಾಯ್ತಿಯನ್ನೂ ಗೆದ್ದಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ನಾಯಕರ ವಿರುದ್ಧ ಸಚಿವ ಮಧು ಬಂಗಾರಪ್ಪ(Madhu Bangarappa) ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ(BJP) ಭ್ರಷ್ಟಾಚಾರಿಗಳು ನನ್ನ ವಿರುದ್ಧ ಟ್ವೀಟ್ ಮಾಡಿದ್ದಾರೆ ಎನ್ನುವ ಮೂಲಕ ಕಿಡಿ ಕಾರಿದ್ದಾರೆ. ಆರ್.ಅಶೋಕ್, ವಿಜಯೇಂದ್ರ, ಕಟೀಲ್ ಟ್ವೀಟ್ ಮಾಡಿದ್ದಾರೆ. ಅಶೋಕ್ ನಿವೇಶನ ಹಂಚಿಕೆಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ. ಅವ್ಯವಹಾರ ಹೊರ ತೆಗೆಯುತ್ತೀನಿ, ಸುಮ್ಮನೆ ಬಿಡಲ್ಲ. ಮಾನ ಮರ್ಯಾದೆ ಇದ್ರೆ ರಾಜೀನಾಮೆ(Resignation) ಕೊಡಿ. ಕಟೀಲ್ (Nalin kumar Kateel) ಸಾವಿನಲ್ಲೂ ರಾಜಕಾರಣ ಮಾಡಿದ್ರು. ಇನ್ನೊಬ್ಬ ವೇಸ್ಟ್ ಫೇಲೋ ರವಿಕುಮಾರ್ ಅಂತಿದ್ದಾನೆ.  ಅವನು ಜೀವನದಲ್ಲಿ ಗ್ರಾಮ ಪಂಚಾಯ್ತಿಯನ್ನೂ ಗೆದ್ದಿಲ್ಲ. ಅವನು ನನ್ನ ರಾಜೀನಾಮೆ ಕೇಳ್ತಾನೆ  ಎಂದು ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು. ನನ್ನ ರಾಜೀನಾಮೆ ಕೇಳಲು ನೀವು ಯಾರು ? ನನ್ನ ರಾಜೀನಾಮೆ ಕೇಳಲು‌ ನಿಮಗೆ ಏನ್ ಯೋಗ್ಯತೆ ಇದೆ ? ಆರ್. ಅಶೋಕ್, ವಿಜಯೇಂದ್ರ ವಿರುದ್ಧ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಜಯೇಂದ್ರ ಅವರೇ, ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ. ನನ್ನ ತಟ್ಟೆ ಕ್ಲೀನ್ ಇದೆ ಎನ್ನುವ ಮೂಲಕ ಮಧು ಬಂಗಾರಪ್ಪ ತಿರುಗೇಟು ನೀಡಿದರು. ಚೆಕ್ ಬೌನ್ಸ್ ಕೇಸ್ ಬಳಿಕ ವ್ಯಾಲ್ಯು‌ ಹೆಚ್ಚಾಯ್ತು. ಸ್ನೇಹಿತರು ಹಣ ಕೊಡಲು ಬಂದಿದ್ರು, ಕಲೆಕ್ಟ್ ಮಾಡಿದ್ರೆ 100 ಕೋಟಿ ಆಗ್ತಿತ್ತು ಎನ್ನುವ ಮೂಲಕ ಬಿಜೆಪಿ ನಾಯಕರ ವಿರುದ್ಧ  ಮಧು ಬಂಗಾರಪ್ಪ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ವೀಕ್ಷಿಸಿ:  2024ರಲ್ಲಿ ಗೆಲ್ಲೋರ್ ಯಾರು..? ಬೀಳೋರ್ ಯಾರು..? ಖಡಕ್ ಚಾಲೆಂಜ್ ಬೆನ್ನತ್ತಿ ಹೊರಟಿದ್ದಾರೆ ತ್ರಿಮೂರ್ತಿಗಳು..!

52:08ಹುಲಿಗಳಿಂದ ದಸರಾ ಆನೆಗಳವರೆಗೆ: ನಾಗರಹೊಳೆಯ ವನ್ಯಜೀವಿ ಲೋಕದ ರೋಚಕ ಕಥೆ
21:29ಸಂಪುಟದಲ್ಲಿ ಮತ್ತೆ ‘ಅದಲು-ಬದಲು’ ಆಟ; ಯಾರಿಗೆ ಸಚಿವ ಸ್ಥಾನ, ಯಾರಿಗೆ ಕುತ್ತು?
24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
22:06ಡಿಕೆ ಶಿವಕುಮಾರ್ ಮಂತ್ರಿಮಂಡಲ, 8 ಗಂಟೆಯ ಗುಟ್ಟು, ಯಾರಿಗೆಲ್ಲಾ ಸಿಗಲಿದೆ ಸಚಿವ ಸ್ಥಾನ?
53:00ಭೂಸ್ವಾಧೀನಕ್ಕೆ ರೈತರ ಭಾರೀ ವಿರೋಧ: ಬಿಡದಿಯಲ್ಲಿ ಅಧಿಕಾರಿಗಳಿಗೆ ಮುತ್ತಿಗೆ, ಬಡಿದಾಟ, ಉದ್ವಿಗ್ನ ವಾತಾವರಣ
50:27ಬಿಡದಿ ಭೂಸ್ವಾಧೀನ ವಿವಾದ: ಕುಮಾರಸ್ವಾಮಿ, ದೇವೇಗೌಡರ ಜಂಟಿ ಹೋರಾಟ ಶುರುವಾಗುತ್ತಾ?
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
29:15Shivamogga: ಮಗಳಂತೆ ನೋಡಿಕೊಳ್ತೀನಿ ಅಂದವರೇ ಕೊಂದುಬಿಟ್ರು..ವರ್ಷದ ಹಿಂದಿನ ಕೇಸ್​​ ಬಯಲಿಗೆ ಬಂದಿದ್ದೇ ರೋಚಕ..!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
56:36ಸುವರ್ಣ ನ್ಯೂಸ್, ಕನ್ನಡ ಪ್ರಭ ವನ್ಯಜೀವಿ ಸಂರಕ್ಷಣಾ ಅಭಿಯಾನ: ಹಂಪಿಯ ಬೆಟ್ಟಗಳಲ್ಲಿ ಅಡಗಿದೆ ವನ್ಯಜೀವಿ ರಹಸ್ಯ
Read more