ಸರ್ಕಾರಿ ಶಾಲೆ ಮೇಲೆ ಬಿತ್ತು ಭೂ ಬಕಾಸುರರ ಕಣ್ಣು..? ಶಾಲೆ ಭೂಮಿ ಕಬಳಿಸಿ ಬಡಾವಣೆ ನಿರ್ಮಾಣಕ್ಕೆ ಪ್ಲಾನ್!

Nov 28, 2023, 10:14 AM IST

ಇದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ. ಸಾವಿರಾರು ಮಕ್ಕಳನ್ನ ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ರೂಪಿಸಿದ ಹಳೆಯ ವಿದ್ಯಾ ದೇಗುಲ. 26 ವರ್ಷಗಳ ಇತಿಹಾಸ ಇರುವ ಸರ್ಕಾರಿ ಶಾಲೆಗೀಗ ಕುತ್ತು ಬಂದಿದೆ. ಮಂಗಳೂರಿನ(Mangalore) ಸುರತ್ಕಲ್ ಸಮೀಪದ ಕಾನಕಟ್ಲ ಕಾಲೋನಿಯಲ್ಲಿ 1.60 ಎಕರೆಯಲ್ಲಿ ಶಾಲೆ  ನಿರ್ಮಾಣಗಿದೆ. ಇದೇ ಪ್ರಾಥಮಿಕ ಶಾಲೆ ಜಾಗದ ಮೇಲೆ ಭೂ ಮಾಫಿಯಾ(Land Mafia) ಕಣ್ಣು ಬಿದ್ದಿದೆ. ಸರ್ಕಾರಿ ಶಾಲೆಯ ಭೂಮಿಯನ್ನೇ ಕಬಳಿಸಿ ಬಡಾವಣೆ ನಿರ್ಮಾಣಕ್ಕೆ ಪ್ಲಾನ್ ನಡೆದಿದೆ.. ಶಾಲೆಯ ಆಟದ ಮೈದಾನವನ್ನೇ(Play ground) ಲೇಔಟ್ ಆಗಿ ಪರಿವರ್ತಿಸಲು ಹುನ್ನಾರದ ಬಗ್ಗೆ ದೂರು ಕೇಳಿ ಬಂದಿದೆ. ಸರ್ಕಾರಿ ಶಾಲೆ ಉಳಿಸಿಕೊಳ್ಳಲುಲು ಗ್ರಾಮಸ್ಥರ ಹೋರಾಟ(Protest) ಆರಂಭವಾಗಿದೆ. ಸರ್ವೇ ನಂಬರ್ 16ರಲ್ಲಿರುವ 1.60 ಎಕ್ರೆ ಜಾಗವನ್ನು 1996ರಲ್ಲಿ ಮಂಜೂರು ಮಾಡಲಾಗಿತ್ತು.‌ ಆದ್ರೀಗ ಶಾಲೆಯ ಮೈದಾನವನ್ನೇ ಅತಿಕ್ರಮಿಸಿ ಮನೆ ನಿರ್ಮಾಣದ ಜೊತೆ ಬಡಾವಣೆ ಪ್ಲಾನ್ ಮಾಡಲಾಗ್ತಿದೆ ಅನ್ನೋದು ಗ್ರಾಮಸ್ಥರ ಆರೋಪ. ಶಾಲೆಯ‌ ಜಾಗ ಅತಿಕ್ರಮಣ ಸಂಬಂಧ ‌ಜಿಲ್ಲಾಡಳಿತ, ಶಿಕ್ಷಣ ಇಲಾಖೆ ವಿರುದ್ದ ಗ್ರಾಮಸ್ಥರು ಪ್ರತಿಭಟನೆ ನಡೆಸ್ತಿದ್ದಾರೆ. ಸಮಗ್ರ ಜಾಗದ ಸರ್ವೇ ನಡೆಸಿ ಭೂ ಮಾಫಿಯಾ ಮಟ್ಟ ಹಾಕಲು ಆಗ್ರಹಿಸಿದ್ದಾರೆ.

ಗ್ರಾಮಸ್ಥರು ಸರ್ವೇ ನಂಬರ್ 16ರಲ್ಲಿರುವ 1.60 ಎಕ್ರೆ ಜಾಗದಲ್ಲಿ ಶಾಲೆ ಕಟ್ಟಲಾಗಿದೆ ಎನ್ನುತ್ತಿದ್ದಾರೆ. ಆದ್ರೆ, ಮೈದಾನದಲ್ಲಿ ಬಡಾವಣೆಗೆ ಸಿದ್ದತೆ ನಡೆಸಿರುವ ಸಂದೀಪ್ ಮಾತ್ರ, ಶಾಲೆ ಕಟ್ಟಿರುವ ಜಾಗ ಸರ್ವೇ ನಂಬರ್ 161 ಆಗಿದ್ದು, ಅದು ನಮ್ಮ ವಂಶಸ್ಥರಿಗೆ ಸೇರಿದೆ ಎನ್ನುತ್ತಿದ್ದಾರೆ. ಹಲವು ವರ್ಷಗಳಿಂದಲೂ ಜಾಗ ನಮ್ಮ ವಂಶಸ್ಥರ ಹೆಸರಿನಲ್ಲಿದೆ ಎಂದು ಸಂದೀಪ್ ವಾದ ಮಾಡ್ತಿದ್ದಾರೆ. ಶಾಲೆಯ ಮೈದಾನ ಇರೋ ಜಾಗ ತಮಗೆ ಸೇರಿದ್ದು ಎನ್ನುವ ವಾದ ಮಾಡುತ್ತಿರುವ ಸಂದೀಪ್ ಕಾನೂನು ಹೋರಾಟಕ್ಕೂ ರೆಡಿ ಎನ್ನುತ್ತಿದ್ದಾರೆ. ಸ್ಥಳೀಯರ ನಿರಂತರ ಹೋರಾಟದ ಬಳಿಕ ಸ್ಥಳಕ್ಕೆ ಮಂಗಳೂರು ತಹಶೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಜಿಲ್ಲಾಡಳಿತ ಸಮಗ್ರ ಸರ್ವೇ ನಡೆಸೋ ಅಗತ್ಯವಿದೆ. ಸದ್ಯ ಎರಡೂ ಕಡೆಯವರು ದಾಖಲೆ ತೋರಿಸ್ತಿದ್ದಾರೆ.. ಆದ್ರಿಂದ ಜಿಲ್ಲಾಡಳಿತ ಸರ್ವೇ ಮಾಡಿ ಅಧಿಕೃತವಾಗಿ ಜಾಗದ ಗುರುತು ಮಾಡಬೇಕಿದೆ.

ಇದನ್ನೂ ವೀಕ್ಷಿಸಿ:  ರಾಜ್ಯ ರಾಜಧಾನಿಯಲ್ಲಿ ಅನ್ನದಾತರ ಕಹಳೆ.. ರೈತ ವಿರೋಧಿ ಕಾಯ್ದೆಗಳ ರದ್ದಿಗೆ ಆಗ್ರಹ