ಸಾವಿರಾರು ಎಕರೆ ಭೂಮಿಗೆ ಭೂಗಳ್ಳರಿಂದ ಬೇಲಿ: ಕಣ್ಮುಚ್ಚಿ ಕುಳಿತಿದೆಯಾ ಸರ್ಕಾರ..?

Jul 18, 2023, 2:51 PM IST

ಕೋಲಾರ: ಚಿನ್ನದ ನಾಡು ಕೋಲಾರವು(Kolar) ಬೆಂಗಳೂರಿಗೆ ಬಹಳ ಹತ್ತಿರವಿದೆ. ಹೀಗಾಗಿ ಇಲ್ಲಿನ ಜಮೀನುಗಳಿಗೆ ಬಂಗಾರದ ಬೆಲೆ ಇರುವುದರಿಂದ ಸರ್ಕಾರಿ ಜಾಗವನ್ನು ಭೂಗಳ್ಳರು ನುಂಗಿದ್ದಾರೆ. ಇಲ್ಲಿನ ಸಾವಿರಾರು ಎಕರೆ ಭೂಮಿಗೆ(Land) ಭೂಗಳ್ಳರು ಬೇಲಿ ಹಾಕಿದ್ದಾರೆ. ಹೀಗಾಗಿ ಸರ್ಕಾರ ಮತ್ತು ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರಾ ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ. ಬರೋಬ್ಬರಿ 3875 ಎಕರೆ ಭೂಮಿಗೆ ಭೂಗಳ್ಳರು ಬೇಲಿ(Fence) ಹಾಕಿದ್ದಾರೆ. ಶ್ರೀನಿವಾಸಪುರ ಅರಣ್ಯ ಭೂಮಿ ಭೂಗಳ್ಳರ ಪಾಲಾಗಿ ಬರೋಬ್ಬರಿ 20 ವರ್ಷ ಆಗಿದೆ. ಈ ಬಗ್ಗೆ ತನಿಖೆ ನಡೆದು 15 ವರ್ಷ ಆದ್ರೂ ಭೂಮಿ ಪಡೆಯಲು ಹಿಂದೇಟು ಹಾಕಲಾಗುತ್ತಿದೆ. ಇವರ ವಿರುದ್ಧ ನಿರ್ಣಯ ನಾರಾಯಣ ಸ್ವಾಮಿ ಹೋರಾಟ ಮಾಡುತ್ತಿದ್ದಾರೆ. 

ಇದನ್ನೂ ವೀಕ್ಷಿಸಿ:  Oommen Chandy : ಉಮ್ಮನ್ ಚಾಂಡಿ- ರಾಜಕೀಯ ಜೀವನದ ಹೆಜ್ಜೆಗುರುತುಗಳು