ಸಿಲಿಕಾನ್‌ ಸಿಟಿಯಲ್ಲಿ 'ಕೃಷಿ ಲೋಕ'ದ ಅನಾವರಣ: ಜಿಕೆವಿಕೆಯಲ್ಲಿ ನೂರಾರು ಕೃಷಿ ಸಾಧಕರಿಗೆ ಸನ್ಮಾನ

ಸಿಲಿಕಾನ್‌ ಸಿಟಿಯಲ್ಲಿ 'ಕೃಷಿ ಲೋಕ'ದ ಅನಾವರಣ: ಜಿಕೆವಿಕೆಯಲ್ಲಿ ನೂರಾರು ಕೃಷಿ ಸಾಧಕರಿಗೆ ಸನ್ಮಾನ

Published : Nov 19, 2023, 08:40 AM IST

ಸಿಲಿಕಾನ್ ಸಿಟಿಯ ಬ್ಯುಸಿ ಲೈಫ್, ವೇಗವಾಗಿ ಓಡ್ತಿರೋ ಜಗತ್ತಿನ ಮಧ್ಯೆ ಕೃಷಿ, ಕೃಷಿ ಸಂಬಂಧಿತ ಚಟುವಟಿಕೆಗಳನ್ನ ಮುಂದಿನ ತಲೆಮಾರಿಗೆ ತಲುಪಿಸೋ ಕೆಲಸವನ್ನ ಕೃಷಿ ವಿಶ್ವವಿದ್ಯಾಲಯ ಮಾಡ್ತಿದೆ. ಅದರ ಭಾಗವಾಗಿ ಪ್ರತಿವರ್ಷದಂತೆ ಈ ವರ್ಷವೂ ಕೃಷಿಮೇಳಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ.
 

ಬೆಂಗಳೂರು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ನಾಲ್ಕು ದಿನಗಳ ಕಾಲ ಕೃಷಿ ಮೇಳ(Krishi mela) ಆಯೋಸಲಾಗಿದೆ. ಆಹಾರ,ಆರೋಗ್ಯ, ಆದಾಯಕ್ಕಾಗಿ ಸಿರಿಧಾನ್ಯ ಅನ್ನೋ ಘೋಷಣೆ ಜತೆಗೆ ಈ ವರ್ಷದ ಕೃಷಿಮೇಳ ನಡೆಸಲಾಗ್ತಿದ್ದು, ಕೃಷಿಮೇಳಕ್ಕೆ ಸಿಎಂ ಸಿದ್ದರಾಮಯ್ಯ(Siddaramaiah), ಡಿಸಿಎಂ ಡಿ.ಕೆ.ಶಿವಕುಮಾರ್(D.K.Shivakumar) ಹಾಗೂ ಕೃಷಿ ಸಚಿವ ಚಲುವರಾಯಸ್ವಾಮಿ(Chaluvarayaswamy) ಸೇರಿ ಹಲವರು ಚಾಲನೆ ನೀಡಿದ್ರು. ಜೊತೆಗೆ  ವಿಶ್ವವಿದ್ಯಾಲಯದ ಸಂಶೋಧನಾ ವಿಭಾಗದ ಹೊಸ ತಳಿಗಳ ಪ್ರಾತ್ಯಕ್ಷಿಕೆಗಳಿಗೆ ಭೇಟಿ ನೀಡಿ ವೀಕ್ಷಿಸಿದ್ರು. ಈ ಭಾರಿ ಕೃಷಿಮೇಳದಲ್ಲಿ ವಿವಿಧ ಭಾಗಗಳ ರೈತ ಸಾಧಕರಿಗೆ ಸನ್ಮಾನ ಮಾಡೋ ಜೊತೆಗೆ ರೈತರ ಜಮೀನುಗಳ ಮಣ್ಣು ಪರೀಕ್ಷೆಗೆ ಅಭಿವೃದ್ಧಿಪಡಿಸಿರೋ ಧರ್ತಿಮಿತ್ರ ಆಪ್ ಕೂಡ ಅನಾವರಣ ಮಾಡಲಾಯ್ತು. ಈ ಭಾರಿ ಕೃಷಿ ಮೇಳದಲ್ಲಿ ಸುಮಾರು 625 ಮಳಿಗೆಗಳನ್ನ ತೆರೆಯಲಾಗಿದ್ದು, ಈ ಬಾರಿ 10 ಲಕ್ಷಕ್ಕೂ ಹೆಚ್ಚು ಮಂದಿ ಭೇಟಿ ನೀಡುವ ಸಾಧ್ಯತೆ ಇದೆ. ಈ ಮೇಳದಲ್ಲಿ ರೈತರಿಗೆ ಕ್ಷೇತ್ರ ಸಂದರ್ಶನ, ಕೃಷಿ ವಿಜ್ಞಾನಿ, ತಜ್ಞರೊಂದಿಗೆ ಸಮಾಲೋಚನೆ, ಮಾರ್ಗದರ್ಶನ, ಪ್ರಾತ್ಯಕ್ಷಿಕೆ, ಹೊಸ ತಳಿಗಳ ಬಗ್ಗೆ ಮಾಹಿತಿ ಒದಗಿಸಲಾಗುತ್ತಿದೆ. ಇನ್ನು ಜಿಕೆವಿಕೆ ಸಂಶೋಧನಾ ವಿಭಾಗ ರಾಗಿ,ಸೂರ್ಯಕಾಂತಿ,ನವಣೆ, ಹಲಸು ಸೇರಿದಂತೆ ಕೆಲ ಸಿರಿಧಾನ್ಯಗಳ ತಳಿಗಳನ್ನ ಅಭಿವೃದ್ಧಿಪಡಿಸಿದ್ದು , ಸಿಎಂ ಸಿದ್ದರಾಮಯ್ಯ ಹೊಸ ತಳಿಗಳನ್ನ ಅನಾವರಣ ಮಾಡಿದ್ರು. ಇದರ ಜೊತೆಗೆ ಹೈನುಗಾರಿಕೆ ವಿಭಾಗದಲ್ಲಿ ವಿವಿಧ ಬಗೆಯ ಕೋಳಿಗಳು, ಕಲರ್ ಫುಲ್ ಮೀನುಗಳು, ಹಳ್ಳಿಕಾರ್ ಹೋರಿ ಗಮನಸೆಳೆದ್ರೆ, ಬಾಟಲ್ ಬದನೆ, ಚೆರ್ರಿ ಟೋಮ್ಯಾಟೋ ಹೀಗೆ ಹತ್ತು ಹಲವು ವೈಶಿಷ್ಟಗಳನ್ನ ಜನ ಕಣ್ತುಂಬಿಕೊಂಡ್ರು.

ಇದನ್ನೂ ವೀಕ್ಷಿಸಿ:  ಸಿದ್ದರಾಮಯ್ಯಗೆ ಸಂಕಷ್ಟ ತಂದ ಹಲೋ ಅಪ್ಪಾಜಿ ವಿಡಿಯೋ, ಆರೋಪ-ಪ್ರತ್ಯಾರೋಪದ ಸುರಿಮಳೆ!

03:40Udupi: ಸರ್ಕಾರಿ ಶಾಲೆಗಳ ಟಾಯ್ಲೆಟ್ ಸ್ವಚ್ಛತೆಗೆ ರಥ: ಗೋಪಾಡಿ ಶ್ರೀನಿವಾಸ ರಾವ್ ಕೊಡುಗೆ!
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
Read more