Nov 10, 2023, 10:52 AM IST
ವೈದ್ಯೋ ನಾರಾಯಣ್ ಹರಿ ಅಂತಾರೆ. ವೈದ್ಯರನ್ನು ನಾರಾಯಣನಿಗೆ ಹೋಲಿಕೆ ಮಾಡ್ತಾರೆ. ಆದ್ರೆ ಅದೇ ವೈದ್ಯ ವೃತ್ತಿಗೆ ಕಳಂಕ ಎಂಬಂತೆ, ರಾಜ್ಯದಲ್ಲಿ ಕೋಲ್ಕತ್ತಾ ನಕಲಿ ಡಾಕ್ಟರ್ಗಳ(Kolkata fake doctors) ಹಾವಳಿ ಹೆಚ್ಚಾಗಿದೆ. ಗಡಿ ಜಿಲ್ಲೆ ಬೀದರ್‌ನ(Bidar) ಗ್ರಾಮೀಣ ಭಾಗದ ಕೋಲ್ಕತ್ತಾ ನಕಲಿ ಡಾಕ್ಟರ್ಗಳ ಹಾವಳಿ ಹೆಚ್ಚಾಗಿದೆ, ಪಶ್ಚಿಮ ಬಂಗಾಳದ ನೂರಾರು ನಕಲಿ ಡಾಕ್ಟರ್‌ಗಳು ಹಳ್ಳಿಗಳಲ್ಲಿ ಠಿಕಾಣಿ ಹೂಡಿ ಕ್ಲಿನಿಕ್‌ಗಳು ಓಪನ್ ಮಾಡಿಕೊಂಡಿದ್ದಾರೆ. ಮುಗ್ಧ ಜನರನ್ನೇ ಬಂಡವಾಳ ಮಾಡಿಕೊಂಡು ಹಣ ಮಾಡೋಕೆ ಇಳಿದ ಇವರು, ಜನರಿಗೆ ಹೈಡೋಸ್ ಔಷಧಿ ಕೊಟ್ಟು ಜೀವದ ಜೊತೆ ಚೆಲ್ಲಾಟವಾಡ್ತಿದ್ದಾರೆ. ಬಡ ಜನರ ಜೀವಗಳ ಜತೆ ಚೆಲ್ಲಾಟವಾಡ್ತಿರುವ ಕೋಲ್ಕತ್ತಾ ನಕಲಿ ಡಾಕ್ಟರ್ಗಳ ಹಾವಳಿ ಬಗ್ಗೆ ಸುವರ್ಣ ನ್ಯೂಸ್ ಕವರ್ ಸ್ಟೋರಿಯಲ್ಲಿ ಬಿತ್ತರವಾಗಿತ್ತು.. ನಮ್ಮ ವರದಿಗೆ ಬೀದರ್ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ. ಕೋಲ್ಕತ್ತಾ ನಕಲಿ ವೈದ್ಯರ ವಿರುದ್ಧ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿದೆ. ನೌಟಂಕಿ ನಕಲಿ ವೈದ್ಯರ ಹಾವಳಿ ತಡೆಯಲು, ಬೀದರ್ ಜಿಲ್ಲಾ ಆರೋಗ್ಯ ಅಧಿಕಾರಿಗಳು ಫಿಲ್ಡಿಗೆ ಇಳಿದಿದ್ದಾರೆ. ಜಿಲ್ಲೆಯ ಸಂಗೋಳಗಿ, ಅಣದೂರ, ಚಿದ್ರಿ ಸೇರಿದಂತೆ ಹಲವಡೆ ದಾಳಿ(Raid) ನಡೆಸಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ಕ್ಲಿನಿಕ್ ಬಂದ್ ಮಾಡುವಂತೆ ತಾಕೀತು ಮಾಡಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಕವರ್ ಸ್ಟೋರಿ ವರದಿಗೆ ಹಿರಿಯ ವೈದ್ಯ ಡಾ.ವಿವಿ ನಾಗರಾಜ್ ಧನ್ಯವಾದ ಸಲ್ಲಿಸಿದ್ರು. ಕವರ್ ಸ್ಟೋರಿ ಸಾಮಾಜಿಕ ಕಾಳಜಿಗೆ aಭಿನಂದಿಸಿದ್ರು.
ಇದನ್ನೂ ವೀಕ್ಷಿಸಿ: ಬೀದರ್‌ನಲ್ಲಿ ಕೋಲ್ಕತ್ತಾ ನಕಲಿ ಡಾಕ್ಟರ್ಸ್ ಹಾವಳಿ: ಮುಗ್ದ ಜನರ ಜೀವದೊಂದಿಗೆ ಚೆಲ್ಲಾಟ