ಬೀದರ್‌ನಲ್ಲಿ ಕೋಲ್ಕತ್ತಾ ನಕಲಿ ಡಾಕ್ಟರ್ಸ್‌ ಹಾವಳಿ: ಮುಗ್ದ ಜನರ ಜೀವದೊಂದಿಗೆ ಚೆಲ್ಲಾಟ

ಬೀದರ್‌ನಲ್ಲಿ ಕೋಲ್ಕತ್ತಾ ನಕಲಿ ಡಾಕ್ಟರ್ಸ್‌ ಹಾವಳಿ: ಮುಗ್ದ ಜನರ ಜೀವದೊಂದಿಗೆ ಚೆಲ್ಲಾಟ

Published : Nov 08, 2023, 02:03 PM IST

ಬೀದರ್‌ ಜಿಲ್ಲೆಯಲ್ಲಿ ಕೋಲ್ಕತ್ತಾ ನಕಲಿ ಡಾಕ್ಟರ್‌ಗಳ ಹಾವಳಿ ಹೆಚ್ಚಾಗಿದ್ದು, ಎಲ್ಲ ರೋಗಗಳಿಗೆ ನೋವು ನಿವಾರಕ ಹೈಡೋಸ್‌ ಔಷಧಿ ನೀಡುತ್ತಾ ಜನರ ಜೀವದೊಂದಿಗೆ  ಚೆಲ್ಲಾಟವಾಡುತ್ತಿದ್ದಾರೆ.

ಬೀದರ್ (ನ.08): ರಾಜ್ಯದ ಗಡಿಭಾಗ ಬೀದರ್‌ ಜಿಲ್ಲೆಯಲ್ಲಿ ಕೋಲ್ಕತ್ತಾ ನಕಲಿ ಡಾಕ್ಟರ್‌ಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಎಲ್ಲ ರೋಗಗಳಿಗೆ ನೋವು ನಿವಾರಕ ಔಷಧಿ ಹಾಗೂ ಮಾತ್ರೆಗಳನ್ನೂ ನೀಡುತ್ತಾ ಜನರ ಜೀವದ ಜೊತೆಗೆ ಆಟವಾಡುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ಜನರು ಕಿಡ್ನಿ ಹಾಗೀ ಇತರೆ ಗಂಭೀರ ಸಮಸ್ಯೆಗಳಿಗೆ ಒಳಗಾಗುತ್ತಿದ್ದರೆ, ಇನ್ನು ಮಕ್ಕಳು ಜೀವಕ್ಕೆ ಬಲಿಯಾಗುತ್ತಿದ್ದಾರೆ. ಬೀದರ್‌ನಲ್ಲಿ ಕಲ್ಕತ್ತಾ ಡಾಕ್ಟರ್ ಗಳ ವಿರುದ್ಧ ಬೀದರ್ ಆರೋಗ್ಯ ಇಲಾಖೆ ಈಗ ಸಮರವನ್ನು ಸಾರಿದೆ.  ನಕಲಿ ಕಲ್ಕತ್ತಾ ಡಾಕ್ಟರ್ ಗಳ ಕ್ಲಿನಿಕ್ ಮೇಲೆ ಅಧಿಕಾರಿಗಳು ದಾಳಿ ಮಾಡುತ್ತಿದ್ದಾರೆ.

ಏಷ್ಯಾನೆಟ್ ಸುವರ್ಣ ನ್ಯೂಸ್ ಕವರ್ ಸ್ಟೋರಿಯಲ್ಲಿ ನಕಲಿ ಕಲ್ಕತ್ತಾ ಡಾಕ್ಟರ್ ಗಳ ಹಾವಳಿ ಕುರಿತು ಕವರ್ ಸ್ಟೋರಿಯಲ್ಲಿ ಸುದ್ದಿ ಪ್ರಸಾರ ಮಾಡುತ್ತಿದ್ದಂತೆ ಬೀದರ್ ಜಿಲ್ಲಾಡಳಿತವು ಮೆಡಿಕಲ್ ಆ್ಯಕ್ಟ್ ಪ್ರಕಾರ ನಕಲಿ ಡಾಕ್ಟರ್ ಮೇಲೆ ಕ್ರಮ ಕೈಗೊಳ್ಳಲು ಮುಂದಾಗಿದೆ. ಯಾವುದೇ ದಾಖಲೆ ಇಲ್ಲದೇ ಪ್ರ್ಯಾಕ್ಟೀಸ್ ಮಾಡುತ್ತಿರುವ ವೈದ್ಯರ ಮೇಲೆ ದಾಳಿ ಮಾಡಿದ್ದು, ಕಲ್ಕತ್ತಾ ಡಾಕ್ಟರ್ಸ್ ವಿರುದ್ಧ ಕ್ರಮಕ್ಕೆ ಡಿಎಚ್ಒಗೆ ಜಿಲ್ಲಾಧಿಕಾರಿ ಗೋವಿಂದ್ ರೆಡ್ಡಿ ಸೂಚನೆ ನೀಡಿದ್ದಾರೆ. 

ಗ್ಯಾರಂಟಿ ಯೋಜನೆಗಳಿಗಾಗಿ ಕೂಲಿ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನಕ್ಕೆ ಕತ್ತರಿ ಹಾಕಿದ ಸರ್ಕಾರ!

ಕಲ್ಕತ್ತಾ ದಿಂದ ಬಂದು ಯಾವುದೇ ಸರ್ಟಿಫಿಕೇಟ್ ಇಲ್ಲದೇ ಕ್ಲಿನಿಕ್ ಓಪನ್ ಮಾಡಿರುವ ನಕಲಿ ಡಾಕ್ಟರ್ಸ್, ಹಳ್ಳಿ ಜನರಿಗೆ ಹೈಡೋಸ್ ಔಷಧಿ ಕೊಟ್ಟು ಜನರ ಪ್ರಾಣಕ್ಕೆ ಕುತ್ತು ತರುತ್ತಿದ್ದಾರೆ. ಈ ನಕಲಿ ಕಲ್ಕತ್ತಾ ವೈದ್ಯರ ಕರ್ಮಕಾಂಡದ ಬಗ್ಗೆ ವಿಸ್ತೃತ ವರದಿ ಪ್ರಸಾರ ಮಾಡಲಾಗಿತ್ತು. ಕಲ್ಕತ್ತಾ ‌ನಕಲಿ ಡಾಕ್ಟರ್ ವಿರುದ್ಧ ತನಿಖೆ ನಡೆಸುವುದಾಗಿ ಜಿಲ್ಲಾಧಿಕಾರಿ ಹೇಳಿದ್ದಾರೆ. ಸಂಗೋಳಗಿ, ಅಣದೂರು, ಚಿದ್ರಿ ಸೇರಿದಂತೆ ಹಲವೆಡೆ ನಕಲಿ ವೈದ್ಯರ ಮೇಲೆ ದಾಳಿ ಮಾಡಲಾಗಿದೆ. ಈ ವೇಳೆ ಸಂಗೋಳಗಿ ಗ್ರಾಮದಲ್ಲಿ ವೈದ್ಯರ ದಾಳಿ ವೇಳೆ ಕೆಲವು ಗೂಂಡಾಗಳಿಂದ ಹಲ್ಲೆ ಮಾಡಿಸಲು ಮುಂದಾಗಿದ್ದಾರೆ. ಜೊತೆಗೆ, ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಮಾತಿನ ಚಕಮಕಿಯನ್ನು ಮಾಡಿದ್ದಾರೆ.

48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
06:25ಶಿವಮೊಗ್ಗದಲ್ಲಿ ಮತಾಂಧರ ಹಾವಳಿ, ಹಿಂದೂ ಎಂದವನ ಮೇಲೆ ಹಲ್ಲೆ
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
08:12ಸಂಧ್ಯಾ ಸುರಕ್ಷಾ ಯೋಜನೆಗೆ ಕನ್ನ; 45-50 ವರ್ಷದ ಅನರ್ಹರಿಗೂ ಪಿಂಚಣಿ ಕೊಟ್ಟು ಕೋಟಿಗಟ್ಟಲೇ ಗೋಲ್‌ಮಾಲ್!
19:15ಸಹೋದರರ ಚಕ್ರವ್ಯೂಹ: ಜಾರಕಿಹೊಳಿ ಬ್ರದರ್ಸ್​ ಏಟಿಗೆ ಬೆಂಡಾದ ‘ಕತ್ತಿ’! ಏನಿದು ಸಾಹುಕಾರ್ ಸೂತ್ರ!
04:51ದಸರಾ ವೈದ್ಯರ ಎಡವಟ್ಟಿಗೆ ಗಜರಾಜನ ಜೀವಕ್ಕೆ ಆಪತ್ತು; ಸಕ್ರೆಬೈಲು ಬಾಲಣ್ಣನ ಮೌನರೋಧನೆ!
Read more