Nov 25, 2023, 10:31 AM IST
ಕೋಲಾರ ಎಪಿಎಂಸಿ ಮಾರುಕಟ್ಟೆ ತನ್ನದೇ ಇತಿಹಾಸ ಹೊಂದಿದೆ. ಏಷ್ಯಾದಲ್ಲೇ 2ನೇ ಅತಿದೊಡ್ಡ ಟೊಮ್ಯಾಟೊ ಮಾರುಕಟ್ಟೆ ಎಂಬ ಖ್ಯಾತಿಯೂ ಇದಕ್ಕಿದೆ. ಕೋಲಾರ(Kolar) ಜಿಲ್ಲೆಯೊಂದರಲ್ಲೇ ಸುಮಾರು 1,500 ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೊ ಮತ್ತು ತರಕಾರಿ ಬೆಳೆಯಲಾಗುತ್ತೆ. ಹೀಗಾಗಿಯೇ ಕೋಲಾರ ಕೃಷಿ ಉತ್ಪನ್ನ ಮಾರುಕಟ್ಟೆಯಿಂದ ದೇಶ ಮಾತ್ರವಲ್ಲದೆ ನೆರೆಯ ಪಾಕಿಸ್ತಾನ, ಬಾಂಗ್ಲಾದೇಶ ಸೆರಿ ಹಲವು ಹಲವು ವಿದೇಶಗಳಿಗೂ ಟೊಮ್ಯಾಟೊ ರಫ್ತು ಮಾಡಲಾಗುತ್ತೆ. ಇಂಥ ಮಾರುಕಟ್ಟೆಗೆ ಜಾಗ ಸಾಕಾಗದೆ ರೈತರು(Farmers) ಪರದಾಡುವಂತಾಗಿದೆ. ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.ಹೀಗಾಗಿ ಜಾಗಕ್ಕಾಗಿ ಪ್ರತಿಭಟನೆ ಶುರುವಾಗಿದೆ. ಕೋಲಾರ ಎಪಿಎಂಸಿಗೆ(APMC) ಪ್ರತಿದಿನ 500ರಿಂದ 700 ಟನ್‌ಗಳಷ್ಟು ಟೊಮ್ಯಾಟೊ ವಿವಿಧ ಜಿಲ್ಲೆಗಳ ರೈತರು ತರ್ತಿದ್ದಾರೆ.. ಮಾರುಕಟ್ಟೆಯಲ್ಲಿ ಸದ್ಯ 18 ಎಕರೆ ಜಾಗವಿದ್ದರೂ ಇದ್ದರೂ ಸ್ಥಳಾವಕಾಶ ಸಮಸ್ಯೆ ಉದ್ಭವಿಸ್ತಿದೆ. ಮಾರುಕಟ್ಟೆಗೆ ಬರುವವರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದೆ. ಮಾರುಕಟ್ಟೆಗೆ ಕನಿಷ್ಠ 50ರಿಂದ 70 ಎಕರೆ ಜಮೀನು ಬೇಕಾಗಿದೆ. ಚುನಾವಣೆ ಸಂದರ್ಭದಲ್ಲಿ ಆಶ್ವಾಸನೆ ನೀಡಿದ್ದ ಜನಪ್ರತಿನಿಧಿಗಳು ಬೃಹತ್ ಮಾರುಕಟ್ಟೆ ನಿರ್ಮಾಣ ಕಾರ್ಯದತ್ತ ಕೈಹಾಕಿಲ್ಲ.ಹೀಗಾಗಿ ರೈತ ಸಂಘ ಹಾಗೂ ಜೆಡಿಎಸ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ರು. ವಿವಿಧ ತರಕಾರಿ, ಟೊಮ್ಯಾಟೊ, ಕೋಳಿ ಹಿಡಿದು ವಿನೂತನವಾಗಿ ಪ್ರತಿಭಟನೆ ನಡೆಸಲಾಯ್ತು.. ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಕೋಲಾರ ಹೊರವಲಯದ ಕೊಂಡರಾಜನಹಳ್ಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆಗೆ ಮುಂದಾದಾಗ ಪ್ರತಿಭಟನಾಕಾರರನ್ನು ಪೊಲೀಸರು ತಡೆದ್ರು. ಕೆಲಕಾಲ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.
ಕೋಲಾರ ಟೊಮ್ಯಾಟೊ ಮಾರುಕಟ್ಟೆ ಪ್ರತ್ಯೇಕಿಸಿ ಬೇರೆಡೆ ಮಾರುಕಟ್ಟೆ ನಿರ್ಮಿಸಲು ಮಂಗಸಂದ್ರ, ಚಲುವನಹಳ್ಳಿ, ಎಂಪೈಯರ್ ಹೋಟೆಲ್ ಹಿಂಭಾಗ ಸುಮಾರು 30 ಎಕರೆ ಗುರುತಿಸಲಾಗಿತ್ತು. ಆದ್ರೆ ವಿವಿಧ ಕಾರಣಾಂತರಗಳಿಂದ ಜಾಗ ಕೊಡಿಸಲು ಜಿಲ್ಲಾಡಳಿತಕ್ಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ರೈತರು ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಕೊಂಡರಾಜನಹಳ್ಳಿ ಬಳಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ಕೊಟ್ಟ ಕೋಲಾರ ಜಿಲ್ಲಾಧಿಕಾರಿ ಅಕ್ರಂ ತಾಂತ್ರಿಕ ಸಮಸ್ಯೆಯಿಂದ ತಡವಾಗ್ತಿದೆ. ಜನವರಿ ತಿಂಗಳಲ್ಲಿ ಎಪಿಎಂಸಿಗೆ ಜಾಗ ಕೊಡಿಸುವ ಭರವಸೆ ನೀಡಿದ್ರು. ಇದರಿಂದ ಪ್ರತಿಭಟನೆ ಕೈಬಿಟ್ಟಿದ್ದಾರೆ. ಜಿಲ್ಲಾಧಿಕಾರಿಗಳ ಭರವಸೆಯಿಂದ ಸದ್ಯಕ್ಕೆ ಪ್ರತಿಭಟನೆ ಕೈಬಿಡಲಾಗಿದೆ. ಒಂದುವೇಳೆ ಜನವರಿಯಲ್ಲೂ ಬೃಹತ್ ಮಾರುಕಟ್ಟೆ ನಿರ್ಮಾಣ ಕಾರ್ಯ ಆರಂಭವಾಗದಿದ್ದರೆ ಮತ್ತೆ ಉಗ್ರ ಹೋರಾಟದ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಇದನ್ನೂ ವೀಕ್ಷಿಸಿ: ರಾಜಧಾನಿ ಬೆಂಗಳೂರಲ್ಲಿ ಮೊದಲ ಬಾರಿಗೆ ಕಂಬಳ: ಇಂದು, ನಾಳೆ ‘ಬೆಂಗಳೂರು ಕಂಬಳ’ದ ಸಂಭ್ರಮ