Jul 21, 2024, 9:18 AM IST
ಮಲೆನಾಡು, ಕರಾವಳಿ ಭಾಗದಲ್ಲಿ ವರುಣ ಮೃದಂಗ ಭಾರಿಸುತ್ತಿದ್ದಾನೆ. ಉತ್ತರದಲ್ಲಿ ಗುಡ್ಡ ಕುಸಿತ(Land slide) ದಕ್ಷಿಣದಲ್ಲಿ ಮಹಾ ಪ್ರವಾಹ ಉಂಟಾಗಿದೆ. ಪ್ರಪಂಚದ ಪ್ರಬಲ ರಾಷ್ಟ್ರಗಳಲ್ಲೂ ಜಲದಿಗ್ಬಂಧನ ಉಂಟಾಗಿದೆ. ಶಿರಾಡಿ ಘಾಟ್ ಗುಡ್ಡ ಕುಸಿದಿದೆ. ವರುಣನ ದಾಳಿಗೆ ಮಲೆನಾಡು ಭಾಗ ತತ್ತರಿಸಿ ಹೋಗಿದೆ. ಪುನರ್ವಸು ಮಳೆಗೆ (Rain) 7 ಜಿಲ್ಲೆಗಳು ಗಢಗಢ ನಡುಗಿ ಹೋಗಿವೆ. ಇನ್ನೂ ಕೋಡಿ ಶ್ರೀ ಮಳೆಯ(Rain) ಬಗ್ಗೆ ನುಡಿದಿದ್ದ ಭವಿಷ್ಯ (Prediction) ಹುಸಿಯಾಗಿಲ್ಲ. ಬಯಲು ಸೀಮೆ ಮಲೆನಾಡು ಆಗ್ತದೆ..ಮಲೆನಾಡು ಬಯಲುಸೀಮೆ ಬಯಸುತ್ತೆ ಎಂದು ಕೋಡಿ ಶ್ರೀ ಭವಿಷ್ಯ ನುಡಿದಿದ್ದರು. ಅಲ್ಲದೇ ವಿದೇಶದಲ್ಲೂ ವಿಪರೀತ ಮಳೆಯಾಗುತ್ತೆ ಎಂದು ಕೋಡಿಶ್ರೀಗಳು (Kodi Shri) ಹೇಳಿದ್ದರು. ಇದೀಗ ಚೀನಾಗೂ ವರುಣನ ಶಾಪ ತಟ್ಟಿದೆ. ವಾಯುಮಾಲಿನ್ಯದಿಂದ ಭಾರತದಲ್ಲಿ ಅಪಮೃತ್ಯುವಾಗುವ ಸಂಭವವಿದೆ. ಜಗತ್ತಿನ ಸಾಮ್ರಾಟರೇ ತಲ್ಲಣಗೊಳ್ಳು, ದುರ್ಘಟನೆ ನಡೆಯುತ್ತೆ. ಆಳುವರು ಅರಿತರೆ ಪಾರಾಗ್ತಿರಿ, ಇಲ್ಲವಾದರೇ ವಿನಾಶ ಕಟ್ಟಿಟ್ಟ ಬುತ್ತಿ ಎಂದು ಭವಿಷ್ಯ ನುಡಿದಿದ್ದರು.
ಇದನ್ನೂ ವೀಕ್ಷಿಸಿ: ನದಿಗೆ ಜಾರಿ ಬಿದ್ದ ವ್ಯಕ್ತಿ.. ಸಾವು ಬದುಕಿನ ಹೋರಾಟ..! ಪ್ರವಾಹದ ಮಧ್ಯೆ ಪ್ರಾಣ ಪಣಕ್ಕಿಟ್ಟು ರೀಲ್ಸ್ ಹುಚ್ಚಾಟ..!