ವಿಶೇಷ ಸಂಸ್ಕೃತಿ ಹಾಗು ಕೊಡವ ಸಮುದಾಯದ ಜೀವನ ಶೈಲಿಯನ್ನು ಹೊರಜಗತ್ತಿಗೆ ಪರಿಚಯಿಸುವ ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣಕ್ಕೆ ಸರ್ಕಾರ ಮುಂದಾಗಿತ್ತು. ಕೆಲ ವರ್ಷಗಳ ಹಿಂದೆಯೇ 5 ಕೋಟಿ ರು. ವೆಚ್ಚದಲ್ಲಿ ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿ ಆರಂಭಿಸಿದ್ದರೂ ಅದು ಪೂರ್ಣವಾಗದೇ ನೆನೆಗುದಿಗೆ ಬಿದ್ದಿದೆ.
ಕೊಡಗು (ನ.24): ವಿಶೇಷ ಸಂಸ್ಕೃತಿ ಹಾಗು ಕೊಡವ ಸಮುದಾಯದ (Kodava Community) ಜೀವನ ಶೈಲಿಯನ್ನು ಹೊರಜಗತ್ತಿಗೆ ಪರಿಚಯಿಸುವ ಕೊಡವ ಹೆರಿಟೇಜ್ ಸೆಂಟರ್ (Kodava Heritage Centre) ನಿರ್ಮಾಣಕ್ಕೆ ಸರ್ಕಾರ ಮುಂದಾಗಿತ್ತು. ಕೆಲ ವರ್ಷಗಳ ಹಿಂದೆಯೇ 5 ಕೋಟಿ ರು. ವೆಚ್ಚದಲ್ಲಿ ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿ ಆರಂಭಿಸಿದ್ದರೂ ಅದು ಪೂರ್ಣವಾಗದೇ ನೆನೆಗುದಿಗೆ ಬಿದ್ದಿದೆ. ಇನ್ನು ಅರ್ಧದಷ್ಟು ಕಾಮಗಾರಿಯೂ ಕೂಡ ಪೂರ್ಣವಾಗಿಲ್ಲ. ಮಡಿಕೇರಿಯ ವಿದ್ಯಾನಗರದಲ್ಲಿರುವ ಬೆಟ್ಟದ ಮೇಲೆ ವಿಭಿನ್ನ ರೀತಿಯ ಸೆಂಟರ್ ಅನುಷ್ಠಾನಗೊಳ್ಳಬೇಕಿತ್ತು.
Kodagu : ಹೆಸರಿಗಷ್ಟೇ 'ಕೂರ್ಗ್ ವಿಲೇಜ್', ಸಾರ್ವಜನಿಕರಿಗೆ ಉಪಯೋಗವಾಗುತ್ತಿಲ್ಲ!
ಸದ್ಯ ಆಳುವ ವರ್ಗದ ಇಚ್ಛಾಶಕ್ತಿಯ ಕೊರತೆಯಿಂದ ನೆನೆಗುದಿಗೆ ಬಿದ್ದುದ್ದು ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದಾರೆ. ಮೂಲಕ ನಿವಾಸಿಗಳ, ಉಡುಗೆ, ಆಹಾರ, ಜೀವನ ಶೈಲಿ ಸೇರಿದಂತೆ ವಿವಿಧ ರೀತಿಯ ವೈಶಿಷ್ಟ್ಯ ಪರಿಚಯಿಸಲು ಮಾಡಿದ ಸೆಂಟರ್ ಅರ್ಧದಷ್ಟು ಆಗದೆ ಉಳಿದಿದೆ.